Home ಟಾಪ್ ಸುದ್ದಿಗಳು ‘ತನ್ನ ಕಂಪನಿಗಳ ಶೇರುಗಳ ಬೆಲೆಗಳನ್ನು ಕೃತಕವಾಗಿ ಹೆಚ್ಚಿಸಿದ ಅದಾನಿ ಗ್ರೂಪ್’ : ಒಸಿಸಿಆರ್‌ಪಿ ಗಂಭೀರ ಆರೋಪ

‘ತನ್ನ ಕಂಪನಿಗಳ ಶೇರುಗಳ ಬೆಲೆಗಳನ್ನು ಕೃತಕವಾಗಿ ಹೆಚ್ಚಿಸಿದ ಅದಾನಿ ಗ್ರೂಪ್’ : ಒಸಿಸಿಆರ್‌ಪಿ ಗಂಭೀರ ಆರೋಪ

ಮುಂಬೈ: ತನ್ನ ಕಂಪನಿಗಳ ಶೇರುಗಳ ಬೆಲೆಗಳನ್ನು ಅದಾನಿ ಗ್ರೂಪ್ ಕೃತಕವಾಗಿ ಹೆಚ್ಚಿಸಿದೆ ಎಂದು ಸಂಘಟಿತ ಅಪರಾಧ ಮತ್ತು ಭ್ರಷ್ಟಾಚಾರ ಯೋಜನೆ (OCCRP)ಯು ಗಂಭೀರ ಆರೋಪ ಮಾಡಿದೆ.

ಅದಾನಿ ಗ್ರೂಪ್ ಶೇರುಗಳ ಬೆಲೆಗಳನ್ನು ಕೃತಕವಾಗಿ ಹೆಚ್ಚಿಸಿದ್ದ ಬಗ್ಗೆ ಕಳೆದ ಜನವರಿಯಲ್ಲಿ ಅಮೆರಿಕದ ಹೂಡಿಕೆ ಸಂಸ್ಥೆ ಹಿಂಡನ್‌ಬರ್ಗ್ ರಿಸರ್ಚ್ ಆರೋಪ ಮಾಡಿತ್ತು. ಅದಾನಿ ಕುಟುಂಬವು ಅಪಾರದರ್ಶಕ ಮಾರಿಷಸ್ ನಿಧಿಗಳ ಮೂಲಕ ತನ್ನದೇ ಕಂಪನಿಗಳಲ್ಲಿ ಕೋಟ್ಯಂತರ ಡಾಲರ್‌ಗಳನ್ನು ಹೂಡಿಕೆ ಮಾಡಿದೆ ಎಂದು ಒಸಿಸಿಆರ್‌ಪಿ ಆರೋಪಿಸಿದೆ.

ಒಸಿಸಿಆರ್‌ಪಿ ವರದಿಯು ಅದಾನಿ ಕಂಪನಿಗಳ ಶೇರುಗಳಿಗೆ ಭಾರೀ ಹಿನ್ನಡೆಯನ್ನುಂಟು ಮಾಡಿದ್ದು, ಅದಾನಿ ಗ್ರೂಪ್ ಶೇರುಗಳು ತೀವ್ರವಾಗಿ ಕುಸಿದಿರುವ ಬಗ್ಗೆ ವರದಿಯಾಗಿವೆ.

ಒಸಿಸಿಆರ್‌ಪಿ ತನ್ನ ವಿರುದ್ಧ ರಹಸ್ಯ ವಿದೇಶಿ ಹೂಡಿಕೆದಾರರನ್ನು ಹೊಂದಿರುವ ಬಗ್ಗೆ ಮಾಡಿರುವ ಎಲ್ಲ ಆರೋಪಗಳನ್ನು ಅದಾನಿ ಗ್ರೂಪ್ ತಿರಸ್ಕರಿಸಿದೆ.

Join Whatsapp
Exit mobile version