ನಟ ದರ್ಶನ್‌, ಪವಿತ್ರಾಗೌಡಗೆ ನಟಿ ರಮ್ಯಾ ಕ್ಲಾಸ್‌.!

Prasthutha|

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಎ1 ಆರೋಪಿ ಪವಿತ್ರಾಗೌಡ ಹಾಗೂ ಎ2 ಆರೋಪಿ ನಟ ದರ್ಶನ್‌ಗೆ ನಟಿ ರಮ್ಯಾ ಕ್ಲಾಸ್‌ ತೆಗೆದುಕೊಂಡಿದ್ದಾರೆ.

- Advertisement -

ನಟಿ ರಮ್ಯಾ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಪ್ರತಿಕ್ರಿಯಿಸಿದ್ದು,ಸಾಮಾಜಿಕ ಜಾಲತಾಣದಲ್ಲಿ ಸರಿಯಾದ ಉದ್ದೇಶದಿಂದಾಗಿಯೇ ಬ್ಲಾಕ್‌ ಎಂಬ ಆಯ್ಕೆಯನ್ನು ನೀಡಲಾಗಿದೆ. ಅತಿರೇಕದ ಟ್ರೋಲ್‌ ಮಾಡಿದಾಗ ನೀವು ದೂರು ನೀಡಬಹುದು. ಅತಿ ಕೆಟ್ಟ ಭಾಷೆಯನ್ನು ಬಳಸಿ ನನ್ನ ಬಗ್ಗೆಯೂ ಟ್ರೋಲ್‌ ಮಾಡಿದ್ದಾರೆ. ಬೇರೆ ನಟರ ಬಗ್ಗೆಯೂ ಟ್ರೋಲ್‌ ಮಾಡಿದ್ದಾರೆ. ಟ್ರೋಲ್‌ ಮಾಡುವವರು ಬೇರೆಯವರ ಹೆಂಡತಿಯರು ಹಾಗೂ ಮಕ್ಕಳನ್ನೂ ಬಿಟ್ಟಿಲ್ಲ. ಇಂತಹ ಕೆಟ್ಟ ಸಮಾಜದಲ್ಲಿ ನಾವು ಬದುಕುತ್ತಿದ್ದೇವೆ. ನಾನೇ ಒಂದಷ್ಟು ಟ್ರೋಲಿಗರ ವಿರುದ್ಧ ಕೇಸ್‌ ದಾಖಲಿಸಿದ್ದೇನೆ. ದೇಶದ ಭವಿಷ್ಯಕ್ಕೆ ಮುನ್ನುಡಿ ಬರೆಯುವ ಇವರು ಸಾಮಾಜಿಕ ಜಾಲತಾಣದಲ್ಲಿ ಹೀಗೇಕೆ ಸಮಯ ಹಾಳು ಮಾಡುತ್ತಿದ್ದಾರೆ? ಅವರ ಭವಿಷ್ಯದ ಮೇಲೆಯೇ ಏಕೆ ಕಲ್ಲು ಹಾಕಿಕೊಳ್ತಿದ್ದಾರೆ ಎಂಬುದಾಗಿ ಅನಿಸಿದ್ದು ಇದೆ ಎಂದು ರಮ್ಯಾ ತಮ್ಮ ಇನ್‌ಸ್ಟಾಗ್ರಾಮ್‌ ಸ್ಟೋರಿಯಲ್ಲಿ ಹಾಕಿಕೊಂಡಿದ್ದಾರೆ.

ಕಾನೂನಿನ ಮುಂದೆ ಎಲ್ಲರೂ ಸಮಾನರು. ಕಾನೂನಿಗಿಂತ ಯಾರು ದೊಡ್ಡವರಲ್ಲ. ಹಾಗಾಗಿ, ಯಾರೂ ಕಾನೂನನ್ನು ಕೈಗೆತ್ತಿಕೊಳ್ಳಬಾರದು. ನೀವು ಯಾರನ್ನೋ ಕೊಲ್ಲಬಾರದು. ನೀವು ನ್ಯಾಯಾಂಗದ ಮೇಲೆ ನಂಬಿಕೆ ಇಟ್ಟಿದ್ದೇ ಆದರೆ, ಒಂದು ದೂರು ದಾಖಲಿಸಿ ಅಷ್ಟೆ. ಹಾಗೆಯೇ, ಥ್ಯಾಂಕ್‌ಲೆಸ್‌ ಜಾಬ್‌ ಮಾಡುತ್ತಿರುವ ಪೊಲೀಸರ ಅವಿರತ ಶ್ರಮವನ್ನೂ ನಾವು ಸ್ಮರಿಸಬೇಕಿದೆ ಹಾಗೆಯೇ, ಯಾವುದೇ ರಾಜಕೀಯ ಒತ್ತಡಕ್ಕೆ ಸಿಲುಕದೆ ಪೊಲೀಸರು ಕಾರ್ಯ ನಿರ್ವಹಿಸುತ್ತಾರೆ ಎಂಬ ವಿಶ್ವಾಸವಿದೆ ಎಂದು ರಮ್ಯಾ ಪೋಸ್ಟ್‌ ಮಾಡಿದ್ದಾರೆ.

- Advertisement -

ಹಾಗೆಯೇ, ಜಸ್ಟಿಸ್‌ ಫಾರ್‌ ರೇಣುಕಾಸ್ವಾಮಿ, ದರ್ಶನ್‌, ಯಡಿಯೂರಪ್ಪ ಹಾಗೂ ಪ್ರಜ್ವಲ್‌ ರೇವಣ್ಣ ಎಂಬ ಹ್ಯಾಶ್‌ಟ್ಯಾಗ್‌ಅನ್ನೂ ಬಳಸಿದ್ದಾರೆ.

Join Whatsapp
Exit mobile version