Home ಟಾಪ್ ಸುದ್ದಿಗಳು ಮಾನಹಾನಿಕರ ಪೋಸ್ಟ್: 20 YouTube ಚಾನಲ್ ಗಳ ವಿರುದ್ಧ ಪೊಲೀಸರಿಗೆ ದೂರು ನೀಡಿದ ನಟಿ ಹನಿ...

ಮಾನಹಾನಿಕರ ಪೋಸ್ಟ್: 20 YouTube ಚಾನಲ್ ಗಳ ವಿರುದ್ಧ ಪೊಲೀಸರಿಗೆ ದೂರು ನೀಡಿದ ನಟಿ ಹನಿ ರೋಸ್

ಮಲಯಾಳಂ ನಟಿ ಹನಿ ರೋಸ್ ಗೆ ಚೆಮ್ಮನೂರು ಜ್ಯುವೆಲರ್ಸ್ ನ ಬಾಬಿ ಚೆಮ್ಮನೂರ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಲಾಗಿತ್ತು. ಈ ಕುರಿತು ಬಾಬಿ ಅವರ ಬಂಧನವೂ ಆಗಿದೆ.


ಈಗ, ತಮ್ಮ ವಿರುದ್ಧ ಯೂಟ್ಯೂಬ್ ಸೇರಿದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಮಾನಹಾನಿ, ಲೈಂಗಿಕ ಕಿರುಕುಳ, ಅಶ್ಲೀಲ ಕಮೆಂಟ್ ಮಾಡುವವರಿಗೂ ಬಿಸಿ ಮುಟ್ಟಿಸಲು ಸಜ್ಜಾಗಿರುವ ಹನಿ ರೋಸ್ ಬರೋಬ್ಬರಿ 20 ಕಿಡಿಗೇಡಿ ಯೂಟ್ಯೂಬ್ ಚಾನಲ್ ಗಳ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ.


ಆರೋಪಿತ ಯೂಟ್ಯೂಬ್ ಚಾನಲ್ ಗಳ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಹನಿ ರೋಸ್ ಎರ್ನಾಕುಲಂ ಪೊಲೀಸರಿಗೆ ದೂರು ನೀಡಿದ್ದಾರೆ ಎಂದು ವರದಿಯಾಗಿದೆ.


ಈ 20 ಯೂಟ್ಯೂಬ್ ಚಾನಲ್ ಗಳು ಹನಿ ರೋಸ್ ಬಗ್ಗೆ ಪ್ರಚೋದನಕಾರಿ ಹಾಗೂ ಮಾನಹಾನಿ ಮಾಡುವಂತೆ ಚಿತ್ರ, ವಿಡಿಯೊಗಳನ್ನು ತಿರುಚಿ ಹಾಕಿದ್ದಲ್ಲದೇ ತಪ್ಪು ಮಾಹಿತಿಯನ್ನು ಕೊಟ್ಟು ಜನಸಾಮಾನ್ಯರ ದಾರಿ ತಪ್ಪಿಸಿದ್ದಾರೆ ಎಂದು ರೋಸ್ ಆರೋಪಿಸಿದ್ದಾರೆ.

Join Whatsapp
Exit mobile version