Home ಟಾಪ್ ಸುದ್ದಿಗಳು ದೇವಸ್ಥಾನ ಪ್ರವೇಶಕ್ಕೆ ನಿರ್ಬಂಧ: ನಟಿ ಅಮಲಾ ಪೌಲ್ ಬೇಸರ

ದೇವಸ್ಥಾನ ಪ್ರವೇಶಕ್ಕೆ ನಿರ್ಬಂಧ: ನಟಿ ಅಮಲಾ ಪೌಲ್ ಬೇಸರ

ನವದೆಹಲಿ: ಖ್ಯಾತ ನಟಿ ಅಮಲಾ ಪೌಲ್ ಅವರಿಗೆ ದೇವಸ್ಥಾನದ ಪ್ರವೇಶ ನಿರ್ಬಂಧಿಸಲಾಗಿದ್ದು, ದೇವಸ್ಥಾನದ ಆಡಳಿತ ಮಂಡಳಿಯ ಈ ಕ್ರಮಕ್ಕೆ ಅವರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.


ಅಮಲಾ ಅವರು ಕೇರಳದ ಎರ್ನಾಕುಲಂನಲ್ಲಿರುವ ತಿರುವೈರಾನಿಕುಲಂ ಮಹಾದೇವ ದೇಗುಲಕ್ಕೆ ತೆರಳಿದ್ದರು. ಆದರೆ ಅಲ್ಲಿನ ಆಡಳಿತ ಮಂಡಳಿಯು ನಟಿಯನ್ನು ದೇಗುಲದ ಗೇಟಿನ ಬಳಿಯೇ ಬಿಡಲು ಸಮ್ಮತಿಸದೆ ಅಲ್ಲಿಯೇ ತಡೆದಿದ್ದಾರೆ. ಈ ದೇಗುಲದೊಳಗೆ ಹಿಂದೂ ಧರ್ಮದವರ ಪ್ರವೇಶಕ್ಕೆ ಮಾತ್ರ ಅವಕಾಶವಿದೆ. ಕ್ರಿಶ್ಚಿಯನ್ ಧರ್ಮದವರಾದ ಅಮಲಾ ಅವರಿಗೆ ದೇವರ ದರ್ಶನ ಪಡೆಯುವುದಕ್ಕೆ ಆಡಳಿತ ಮಂಡಳಿ ಅವಕಾಶ ಮಾಡಿಕೊಟ್ಟಿಲ್ಲ ಎನ್ನಲಾಗಿದೆ.


ಈ ವಿಚಾರವಾಗಿ ನಟಿ ಬೇಸರ ವ್ಯಕ್ತಪಡಿಸಿದ್ದು, ದೇಗುಲದ ಪ್ರವಾಸಿಗರ ಡೈರಿಯಲ್ಲಿ ಇದೇ ವಿಚಾರವನ್ನು ಬರೆದು ಬಂದಿದ್ದಾರೆ. ‘ನಾನು ಹಿಂದೂ ಅಲ್ಲ ಎನ್ನುವ ಕಾರಣಕ್ಕೆ ದೇವರ ದರ್ಶನಕ್ಕೆ ಅವಕಾಶ ಕೊಟ್ಟಿಲ್ಲ. ನಾನು ದೇವರ ದರ್ಶನ ಪಡೆಯದಿದ್ದರೂ ದೇವರ ಚೈತನ್ಯವನ್ನು ಅನುಭವಿಸಿದ್ದೇನೆ ಎಂದಿದ್ದಾರೆ.

“ಇದು ವಿಷಾದನೀಯ, 2023ರಲ್ಲೂ ಧಾರ್ಮಿಕ ತಾರತಮ್ಯ ಇರುವುದೆಂದರೇನು? ನಾನು ದೇವರ ಹತ್ತಿರ ಹೋಗಲಾಗಲಿಲ್ಲ. ದೂರದಿಂದಲೇ ಅನುಭೂತಿಯನ್ನು ಅನುಭವಿಸಿದೆ. ಬೇಗನೆ ಈ ಧಾರ್ಮಿಕ ತಾರತಮ್ಯ ಕೊನೆಗೊಳಿಸುತ್ತಾರೆ ಎಂದು ಆಶಿಸುತ್ತೇನೆ. ಎಲ್ಲ ಧರ್ಮದವರನ್ನು ಸಮಾನವಾಗಿ ಕಾಣಬೇಕಾದ ಕಾಲ ಬಂದಿದೆ” ಎಂದು ದೇವಾಲಯಕ್ಕೆ ಬರುವವರ ಅಭಿಪ್ರಾಯ ಪುಸ್ತಕದಲ್ಲಿ ಬರೆದಿದ್ದಾರೆ.

ತಿರುವೈರಾಣಿಕುಳಂ ಮಹಾದೇವ ದೇವಾಲಯದಲ್ಲಿ 12 ದಿನಗಳ ದೇವಿ ಪಾರ್ವತಿಯ ನಡತುರಪ್ಪು ಎಂಬ ಉತ್ಸವ ಜನವರಿ 16ರಿಂದ ಆರಂಭವಾಗಿದೆ.  ಇದು ಶಿವಾಲಯವಾಗಿದ್ದು, ಪಾರ್ವತಿಯವರ ಮೂರ್ತಿಯನ್ನು 12 ದಿನ ಮಾತ್ರ ಭಕ್ತರಿಗೆ ತೆರೆದಿಡಲಾಗುತ್ತದೆ.  

Join Whatsapp
Exit mobile version