Home ಟಾಪ್ ಸುದ್ದಿಗಳು ಅತ್ಯಾಚಾರ ಆರೋಪ: ನಟಿಯ ಹೆಸರು ಬಹಿರಂಗಪಡಿಸಿದ ನಟ ವಿಜಯ್ ಬಾಬು ವಿರುದ್ಧ ಮತ್ತೊಂದು ಪ್ರಕರಣ

ಅತ್ಯಾಚಾರ ಆರೋಪ: ನಟಿಯ ಹೆಸರು ಬಹಿರಂಗಪಡಿಸಿದ ನಟ ವಿಜಯ್ ಬಾಬು ವಿರುದ್ಧ ಮತ್ತೊಂದು ಪ್ರಕರಣ

ಕೇರಳ; ಚಿತ್ರದಲ್ಲಿ ಅವಕಾಶ ನೀಡುತ್ತೇನೆ ಎಂದು ಭರವಸೆ ನೀಡಿ ನನ್ನನ್ನು ಅತ್ಯಾಚಾರ ಮಾಡಿದ್ದಾರೆ ಎಂದು ಮಲಯಾಳಂ ನಟ ವಿಜಯ್ ಬಾಬು ವಿರುದ್ಧ ನಟಿಯೊಬ್ಬಳು ಆರೋಪ ಹೊರಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿ ನಟನ ವಿರುದ್ದ ಪ್ರಕರಣ ದಾಖಲಾಗಿತ್ತು. ಬಳಿಕ ಫೇಸ್ ಬುಕ್ ಲೈವ್ ಬಂದಿದ್ದ ನಟ ವಿಜಯ್, ಸಂತ್ರಸ್ತೆಯ ಹೆಸರನ್ನು ಬಹಿರಂಗ ಪಡಿಸಿದ್ದರು. ಇದೀಗ ಈ ವಿಚಾರಕ್ಕೆ ಸಂಬಂಧಿಸಿ ನಟನ ವಿರುದ್ಧ ಮತ್ತೊಂದು ಪ್ರಕರಣ ದಾಖಲಾಗಿದೆ.

ಲೈವ್ ಮೂಲಕ ನಟಿಯ ಆರೋಪ ತಳ್ಳಿ ಹಾಕಿದ್ದ ವಿಜಯ್, “ನನ್ನ ವಿರುದ್ಧ ಆರೋಪ ಮಾಡಿರುವ ನಟಿಯ ಹೆಸರನ್ನು ಬಹಿರಂಗಪಡಿಸಿದ್ದಕ್ಕಾಗಿ ಯಾವುದೇ ಕಾನೂನು ಪರಿಣಾಮಗಳನ್ನು ಎದುರಿಸಲು ನಾನು ಸಿದ್ಧ ಎಂದಿದ್ದರು. ನಟಿಯ ಈ ಆರೋಪಗಳು ನನ್ನ ಹೆಸರಿಗೆ ಕಳಂಕ ತಂದಿದ್ದು, ಅಲ್ಲದೇ ಕುಟುಂಬಿಕರಿಗೂ, ಸ್ನೇಹಿತರಿಗೂ ಮುಜುಗರ ಉಂಟುಮಾಡಿದೆ ಎಂದು ಹೇಳಿದ್ದರು.

ಲೈಂಗಿಕ ದೌರ್ಜನ್ಯದಂತಹ ಪ್ರಕರಣಗಳಲ್ಲಿ ಸಂತ್ರಸ್ತರ ಗುರುತನ್ನು ಬಹಿರಂಗಪಡಿಸುವುದು ಕಾನೂನಿನಡಿಯಲ್ಲಿ ಶಿಕ್ಷಾರ್ಹವಾಗಿದ್ದರೂ, ಈ ಆರೋಪವನ್ನು ಎದುರಿಸಲು ಸಿದ್ಧ ಎಂದು ವಿಜಯ್ ಬಾಬು ಲೈವ್ ನಲ್ಲಿ ವಿಜಯ್ ಬಾಬು ಮೊದಲೇ ತಿಳಿಸಿದ್ದರು. ಅತ್ಯಾಚಾರ ಆರೋಪ ಹೊರಿಸಿರುವ ನಟಿ ನನಗೆ ಕಳುಹಿಸಿರುವ ಸಂದೇಶಗಳು ಮತ್ತು 400 ಸ್ಕ್ರೀನ್‌ ಶಾಟ್‌ಗಳು ಸೇರಿದಂತೆ ಹಲವು ಪುರಾವೆಗಳು ನನ್ನ ಬಳಿ ಇವೆ” ಎಂದು ನಟ ವಿಜಯ್ ಬಾಬು ತಿಳಿಸಿದ್ದರು.

Join Whatsapp
Exit mobile version