Home ಟಾಪ್ ಸುದ್ದಿಗಳು ‘ಬಿರಿಯಾನಿ ತಿಂದರೆ ಜಿಹಾದಿ, ಪೇಟ ಧರಿಸಿದರೆ ಖಲಿಸ್ತಾನಿ; ಫ್ಯಾಸಿಸ್ಟ್ ಸರ್ಕಾರದ ಬಗ್ಗೆ ಏನನ್ನೂ ಹೇಳುವಂತಿಲ್ಲ’ :...

‘ಬಿರಿಯಾನಿ ತಿಂದರೆ ಜಿಹಾದಿ, ಪೇಟ ಧರಿಸಿದರೆ ಖಲಿಸ್ತಾನಿ; ಫ್ಯಾಸಿಸ್ಟ್ ಸರ್ಕಾರದ ಬಗ್ಗೆ ಏನನ್ನೂ ಹೇಳುವಂತಿಲ್ಲ’ : ನಟ ಸಿದ್ಧಾರ್ಥ್

ಬಂಧಿತ ಪರಿಸರ ಕಾರ್ಯಕರ್ತೆ ದಿಶಾ ರವಿ ಅವರಿಗೆ ಬೆಂಬಲ ಮತ್ತು ಒಗ್ಗಟ್ಟನ್ನು ವ್ಯಕ್ತಪಡಿಸಿ ತಮಿಳು ನಟ ಸಿದ್ಧಾರ್ಥ್ ಟ್ವೀಟ್ ಮಾಡಿದ್ದಾರೆ.

“ಪ್ರತಿಭಟನಾಕಾರರು ಚರ್ಚ್‌ನಲ್ಲಿ ಒಟ್ಟುಗೂಡಿದರೆ ಅವರು ಕ್ರಿಶ್ಚಿಯನ್ ಬಂಡುಕೋರರಾಗುತ್ತಾರೆ. ಬಿರಿಯಾನಿ ತಿಂದರೆ ಜಿಹಾದಿ, ಪೇಟ ಧರಿಸಿದರೆ ಖಲಿಸ್ತಾನಿ ಎಂದು ಕರೆಯಲಾಗುತ್ತದೆ. ಸಂಘಟಿಸಿದರೆ ‘ಟೂಲ್ ಕಿಟ್’ ಎಂದಾಗುತ್ತದೆ. ಆದರೆ ನಾವು ಫ್ಯಾಸಿಸ್ಟ್ ಸರಕಾರದ ಬಗ್ಗೆ ಏನನ್ನೂ ಹೇಳುವಂತಿಲ್ಲ, ನಾಚಿಕೆಗೇಡು.”

ಸಿದ್ದಾರ್ಥ್

https://twitter.com/Actor_Siddharth/status/1360981245316882440

ಸಿದ್ಧಾರ್ಥ್ ಮಾಧ್ಯಮ ಮತ್ತು ದೆಹಲಿ ಪೊಲೀಸರನ್ನು ಟೀಕಿಸಿದ್ದಾರೆ. ಗೋದಿ ಮೀಡಿಯಾ ಟೂಲ್ ಕಿಟ್ ಏನೆಂಬುದನ್ನೂ ಸಹ ವಿಚಾರಣೆ ನಡೆಸಿಲ್ಲ ಎಂದು ಸಿದ್ಧಾರ್ಥ್ ಟ್ವೀಟ್ ಮಾಡಿದ್ದಾರೆ. ನೀವು ಸ್ನೇಹಿತರೊಂದಿಗೆ ಚಲನಚಿತ್ರ ನೋಡಲು ಹೋಗಬೇಕು. ಯಾವ ಚಲನಚಿತ್ರ ನೋಡಬೇಕು, ಎಲ್ಲಿ ಸೇರಬೇಕು, ಯಾವಾಗ ಸೇರಬೇಕು ಎಂಬಿತ್ಯಾದಿ ಸಂದೇಶಗಳನ್ನು ನೀವು ಸ್ನೇಹಿತರಿಗೆ  ಕಳುಹಿಸುತ್ತೀರಿ. ಇದು ಟೂಲ್ ಕಿಟ್ ಆಗಿರಬಹುದು ಎಂದು ಸಿದ್ಧಾರ್ಥ್ ಟ್ವೀಟ್ ಮಾಡಿದ್ದಾರೆ.

https://twitter.com/Actor_Siddharth/status/1360979233300914180

ದಿಶಾಗೆ ಈ ರೀತಿ ಸಂಭವಿಸಿರುವುದರಲ್ಲಿ ವಿಷಾದವಿದೆ. ನಾನು ದಿಶಾ ಪರ ನಿಲ್ಲುತ್ತೇವೆ ಎಂದು ಸಿದ್ಧಾರ್ಥ್ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

https://twitter.com/Actor_Siddharth/status/1360979682074632194

ದಿಶಾ ರವಿ ಪ್ರಸ್ತುತ 5 ದಿನಗಳ ಕಾಲ ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ಟೂಲ್ ಕಿಟ್ ಪ್ರಕರಣದಲ್ಲಿ ದೆಹಲಿ ಪೊಲೀಸರು ಇತರ ಇಬ್ಬರ ವಿರುದ್ಧ ಬಂಧನ ವಾರಂಟ್ ಹೊರಡಿಸಿದ್ದಾರೆ. ಬಾಂಬೆಯ ವಕೀಲರಾದ ನಿಖಿತಾ ಜಾಕೋಬ್ ಮತ್ತು ಶಾಂತನು ಅವರಿಗೆ ವಾರಂಟ್ ಹೊರಡಿಸಲಾಗಿದೆ. ನಿಖಿತಾ ಬಂಧನದಿಂದ ರಕ್ಷಣೆ ಕೋರಿ ಬಾಂಬೆ ಹೈಕೋರ್ಟ್ ಅನ್ನು ಸಂಪರ್ಕಿಸಿದ್ದಾರೆ.

Join Whatsapp
Exit mobile version