Home ಟಾಪ್ ಸುದ್ದಿಗಳು ನಟ ರವೀಂದ್ರ ಮಹಾಜನಿ ಶವವಾಗಿ ಪತ್ತೆ

ನಟ ರವೀಂದ್ರ ಮಹಾಜನಿ ಶವವಾಗಿ ಪತ್ತೆ

ಪುಣೆ: ಮರಾಠಿ ಚಿತ್ರರಂಗದ ಹಿರಿಯ ನಟ ಹಾಗೂ ನಿರ್ದೇಶಕ ರವೀಂದ್ರ ಮಹಾಜನಿ ತಮ್ಮ ಬಾಡಿಗೆ ಫ್ಲಾಟ್ ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಅವರು ಮೂರು ದಿನಗಳ ಹಿಂದೆ ಮೃತಪಟ್ಟಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.


ರವೀಂದ್ರ ಮಹಾಜನಿ ಅವರು ತಮ್ಮ ಫ್ಲಾಟ್ನಲ್ಲಿ ಒಂಟಿಯಾಗಿ ವಾಸ ಮಾಡುತ್ತಿದ್ದರು. ಈ ಫ್ಲಾಟ್ ನಲ್ಲಿ ಕೆಟ್ಟ ವಾಸನೆ ಬರುತ್ತಿರುವುದನ್ನು ಗಮನಿಸಿ ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅವರು ಬಾಗಿಲು ಹೊಡೆದು ನೋಡಿದಾಗ ರವೀಂದ್ರ ಮಹಾಜನಿ ಮೃತಪಟ್ಟಿದ್ದರು ಎಂದು ಸ್ಥಳೀಯರು ಹೇಳಿದ್ದಾರೆ.


70 ಹಾಗೂ 80ರ ದಶಕದಲ್ಲಿ ರವೀಂದ್ರ ಮಹಾಜನಿ ಅವರು ಹಲವಾರು ಮರಾಠಿ ಸಿನಿಮಾಗಳಲ್ಲಿ ನಟಿಸಿದ್ದರು.

Join Whatsapp
Exit mobile version