Home ಟಾಪ್ ಸುದ್ದಿಗಳು ಮಿಲಿಟರಿ ಸಮವಸ್ತ್ರದಲ್ಲಿ ವಯನಾಡಿಗೆ ಭೇಟಿ ನೀಡಿದ ನಟ ಮೋಹನ್ ಲಾಲ್: 3 ಕೋಟಿ ನೆರವು

ಮಿಲಿಟರಿ ಸಮವಸ್ತ್ರದಲ್ಲಿ ವಯನಾಡಿಗೆ ಭೇಟಿ ನೀಡಿದ ನಟ ಮೋಹನ್ ಲಾಲ್: 3 ಕೋಟಿ ನೆರವು

ವಯನಾಡ್: ಕೇರಳದ ವಯನಾಡಿನಲ್ಲಿ ಸಂಭವಿಸಿರುವ ಭೀಕರ ಗುಡ್ಡ ಕುಸಿತ 350ಕ್ಕೂ ಹೆಚ್ಚು ಜನರ ಜೀವ ಬಲಿ ಪಡೆದಿದೆ. ಕರ್ನಾಟಕ ಸರ್ಕಾರ ಸೇರಿದಂತೆ ಹಲವು ಸಂಘ-ಸಂಸ್ಥೆಗಳು, ಉದ್ಯಮಿಗಳು ಇನ್ನಿತರರು ನೆರವಿಗೆ ಧಾವಿಸಿದ್ದಾರೆ. ಇದರ ನಡುವೆ ಇಂದು ವಯನಾಡಿಗೆ ಮಿಲಿಟರಿ ಸಮವಸ್ತ್ರ ಧರಿಸಿ ಭೇಟಿ ನೀಡಿರುವ ನಟ ಮೋಹನ್ ಲಾಲ್ ಸ್ಥಳದಲ್ಲೇ ಮೂರು ಕೋಟಿ ರೂಪಾಯಿ ನೆರವು ಘೋಷಣೆ ಮಾಡಿದ್ದಾರೆ.

ಮೋಹನ್ ಲಾಲ್ ನಟರಾಗಿರುವ ಜೊತೆಗೆ ಭಾರತೀಯ ಟೆರಟೋರಿಯಲ್ ಸೈನ್ಯದ ಲೆಫ್ಟನೆಂಟ್ ಕರ್ನಲ್ ಸಹ ಆಗಿದ್ದಾರೆ. ಭಾರತೀಯ ಟೆರಟೋರಿಯಲ್ ಸೈನ್ಯವೇ ಕೇರಳದ ವಯನಾಡಿನಲ್ಲಿ ರಕ್ಷಣಾ ಕಾರ್ಯದಲ್ಲಿ ನಿರತರಾಗಿದ್ದು, ಲೆಫ್ಟನೆಂಟ್ ಕರ್ನಲ್ ಆಗಿರುವ ಮೋಹನ್ ಲಾಲ್ ಇಂದು ವಯನಾಡಿಗೆ ಕರ್ನಲ್ ಸಮವಸ್ತ್ರ ಧರಿಸಿ ಭೇಟಿ ನೀಡಿದ್ದರು. ಜೊತೆಗೆ ರಕ್ಷಣಾ ಕಾರ್ಯಗಳ ಖರ್ಚಿಗೆ ಬರೋಬ್ಬರಿ 3 ಕೋಟಿ ರೂಪಾಯಿ ಸಹಾಯಧನವನ್ನು ಘೋಷಿಸಿದರು.


ಗುಡ್ಡ ಕುಸಿತದಿಂದ ತೀವ್ರ ಹಾನಿ ಸಂಭವಿಸಿರುವ ಮಂಡಕೈ, ಚೂರಲಮಾಲ, ಪುಂಚಿರಿಮಟ್ಟನ್ ಇನ್ನೂ ಕೆಲವು ಸ್ಥಳಗಳಿಗೆ ಮೋಹನ್ ಲಾಲ್ ಭೇಟಿ ನೀಡಿದರು. ಸ್ಥಳದಲ್ಲಿ ರಕ್ಷಣಾ ಕಾರ್ಯದಲ್ಲಿ ನಿರತರಾಗಿರುವ ಸೈನ್ಯಾಧಿಕಾರಿಗಳು ಮೋಹನ್ ಲಾಲ್ ಅವರಿಗೆ ಪರಿಸ್ಥಿತಿಯ ವಿವರಣೆ ನೀಡಿದರು. ಈ ವೇಳೆ ರಕ್ಷಣಾ ಕಾರ್ಯದಲ್ಲಿ ನಿರತರಾಗಿರುವ ಸೈನಿಕರು, ಸ್ವಯಂ ಸೇವಕರು, ಸ್ಥಳೀಯ ರಕ್ಷಣಾ ಪಡೆಗಳೊಂದಿಗೆ ಮೋಹನ್ನಾಲ್ ಮಾತನಾಡಿ, ಅವರ ಕಾರ್ಯಕ್ಕೆ ಮೆಚ್ಚುಗೆ ತುಂಬಿದರು. ಮಾತ್ರವಲ್ಲದೆ ಸಂತ್ರಸ್ತರ ಕುಟುಂಬವನ್ನು ಸಹ ಮೋಹನ್ಲಾಲ್ ಈ ಕ್ಷಣ ಭೇಟಿಯಾದರು.

Join Whatsapp
Exit mobile version