Home ಟಾಪ್ ಸುದ್ದಿಗಳು ನಟ ಜಗ್ಗೇಶ್ ಕತ್ತಲ್ಲೂ ಇದೆ ಹುಲಿ ಉಗುರಿನ ಲಾಕೆಟ್: ಬಂಧನ ಯಾವಾಗ ಎಂದ ನೆಟ್ಟಿಗರು..!

ನಟ ಜಗ್ಗೇಶ್ ಕತ್ತಲ್ಲೂ ಇದೆ ಹುಲಿ ಉಗುರಿನ ಲಾಕೆಟ್: ಬಂಧನ ಯಾವಾಗ ಎಂದ ನೆಟ್ಟಿಗರು..!

ಬೆಂಗಳೂರು: ಬಿಗ್ ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಅವರು ಹುಲಿ ಉಗುರು ಹೊಂದಿರುವ ಆರೋಪದ ಮೇಲೆ ಬಂಧನಕ್ಕೆ ಒಳಗಾದರು. ಇದಾದ ಬಳಿಕ ಎಲ್ಲೆಲ್ಲೂ ಹುಲಿ ಉಗುರಿನ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಈಗ ಜಗ್ಗೇಶ್ ಕತ್ತಲ್ಲೂ ಹುಲಿ ಉಗುರು ಇದೆ ಎಂದು ಸ್ವತಃ ಅವರೇ ಈ ವಿಚಾರವನ್ನು ಒಪ್ಪಿಕೊಂಡಿದ್ದಾರೆ.

ಖಾಸಗಿ ಸುದ್ದಿ ಸಂಸ್ಥೆ ಒಂದಕ್ಕೆ ಜಗ್ಗೆಶ್ ಅವರು ಸಂದರ್ಶನ ನಿಡಿದ್ದರು. ಈ ವೇಳೆ ನನಗೆ 20 ವರ್ಷ ಆದಾಗ ನನ್ನಮ್ಮ ನನ್ನ ಮಗ ಹುಲಿ ಇದ್ದಂಗೆ ಇರಬೇಕು ಅಂತ ಹೇಳಿ ಒರಿಜಿನಲ್ ಹುಲಿ ಉಗುರಿನಲ್ಲಿ ಈ ಲಾಕೆಟ್ ಇರುವ ಸರ ಮಾಡಿಸಿ ಹಾಕಿದ್ದರು ಎಂದಿದ್ದರು. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.


ಇದನ್ನು ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್ ಮಾಡಿರುವ ಹಲವರು, ವರ್ತೂರ್ ಸಂತೋಷ್ ಗೆ ಒಂದು ನ್ಯಾಯ, ಜಗ್ಗೇಶ್ ಗೆ ಒಂದು ನ್ಯಾಯ. ರಾಜ್ಯಸಭಾ ಸದಸ್ಯ ಜಗ್ಗೇಶ್ ಅವರ ಬಂಧನ ಯಾವಾಗ? ಎಂದು ಪ್ರಶ್ನಿಸುತ್ತಿದ್ದಾರೆ.

Join Whatsapp
Exit mobile version