Home ಟಾಪ್ ಸುದ್ದಿಗಳು ಸಮುದ್ರತಟದಲ್ಲಿ ಜಂಪಿಂಗ್ ವೇಳೆ ಅವಘಡ: ನಟ ದಿಗಂತ್ ಸ್ಥಿತಿ ಗಂಭೀರ

ಸಮುದ್ರತಟದಲ್ಲಿ ಜಂಪಿಂಗ್ ವೇಳೆ ಅವಘಡ: ನಟ ದಿಗಂತ್ ಸ್ಥಿತಿ ಗಂಭೀರ

ಗೋವಾ: ಸ್ಯಾಂಡಲ್’ವುಡ್ ನಟ ದಿಗಂತ್’ಗೆ ಬೆನ್ನು ಮೂಳೆಗೆ ಬಲವಾದ ಪೆಟ್ಟಾಗಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಕುಟುಂಬಸ್ಥರೊಂದಿಗೆ ಗೋವಾ ಪ್ರವಾಸದಲ್ಲಿದ್ದ ನಟ ದಿಗಂತ್, ಸಮುದ್ರ ತಟದಲ್ಲಿ ಸಮ್ಮರ್ ಶಾಟ್ ಹೊಡೆಯುವ ವೇಳೆ ಬೆನ್ನುಮೂಳೆಗೆ ಬಲವಾದ ಪೆಟ್ಟಾಗಿದ್ದು, ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.

ಗೋವಾದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ದಿಗಂತ್ ಅವರನ್ನು ಬೆಂಗಳೂರಿಗೆ ಏರ್’ಲಿಫ್ಟ್ ಮಾಡಲಾಗಿದೆ. ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತಿದೆ.

ಕೆಲ ದಿನಗಳ ಹಿಂದಷ್ಟೆ ನಟ ದಿಗಂತ್ ಮತ್ತವರ ಕುಟುಂಬ ಗೋವಾಗೆ ಟ್ರಿಪ್ ಹೋಗಿದ್ದರು. ಈ ವೇಳೆ ಸಮುದ್ರ ತೀರದಲ್ಲಿ ಮೋಜು ಮಸ್ತಿಯಲ್ಲಿ ತೊಡಗಿಸಿಕೊಂಡಿದ್ದ ವೇಳೆ ಈ ಅವಘಡ ಸಂಭವಿಸಿದೆ

Join Whatsapp
Exit mobile version