Home ಟಾಪ್ ಸುದ್ದಿಗಳು ನಟ ಚೇತನ್ ಗೆ ಮಸಿ ಬಳಿಯಲು ಯತ್ನ; 12 ಮಂದಿ ಸಂಘಪರಿವಾರದ ಕಾರ್ಯಕರ್ತರ ಬಂಧನ

ನಟ ಚೇತನ್ ಗೆ ಮಸಿ ಬಳಿಯಲು ಯತ್ನ; 12 ಮಂದಿ ಸಂಘಪರಿವಾರದ ಕಾರ್ಯಕರ್ತರ ಬಂಧನ


ಬೆಂಗಳೂರು: ದೈವಾರಾಧನೆ ಹಿಂದೂ ಸಂಸ್ಕೃತಿಯಲ್ಲ ಎಂದು ಹೇಳಿಕೆ ನೀಡಿದ್ದ ನಟ ಚೇತನ್ ಗೆ ಮಸಿ ಬಳಿಯಲು ತೆರಳುತ್ತಿದ್ದ 12 ಮಂದಿ ಸಂಘಪರಿವಾರದ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.


ನಟ ಚೇತನ್ ಅವರು ಇತ್ತೀಚೆಗೆ ಕಾಂತಾರ ಸಿನಿಮಾದ ಕಥಾವಸ್ತು ಬಗ್ಗೆ ಹೇಳಿಕೆ ನೀಡಿದ್ದರು. ದೈವಾರಾಧನೆ ಹಿಂದೂ ಸಂಸ್ಕೃತಿಯಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಇದನ್ನು ಸಂಘಪರಿವಾರ ವಿರೋಧಿಸಿತ್ತು. ಈ ಬಗ್ಗೆ ಚೇತನ್ ವಿರುದ್ಧ ಕಾರ್ಕಳ ಪೊಲೀಸ್ ಠಾಣೆಗೆ ದೂರು ಕೂಡ ನೀಡಲಾಗಿತ್ತು.


ಇದರ ಬೆನ್ನಲ್ಲೇ ಶೇಷಾದ್ರಿಪುರಂನಲ್ಲಿರುವ ಚೇತನ್ ಅವರ ಮನೆ ಬಳಿ ಪ್ರತಿಭಟನೆ ಮಾಡಲು ಆಗಮಿಸಿದ ಸಂಘಪರಿವಾರದ 12ಕ್ಕೂ ಅಧಿಕ ಕಾರ್ಯಕರ್ತರು, ನಟ ಚೇತನ್ ಅವರ ಮುಖಕ್ಕೆ ಮಸಿ ಬಳಿಯಲು ಮುಂದಾದಾಗ ಪೊಲೀಸರು ಅವರೆಲ್ಲರನ್ನು ವಶಕ್ಕೆ ಪಡೆದು ಕರೆದೊಯ್ದಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Join Whatsapp
Exit mobile version