Home ಜಾಲತಾಣದಿಂದ ನಟ ಆದಿತ್ಯ ಸಿಂಗ್ ರಜಪೂತ್ ಮೃತದೇಹ ಅನುಮಾನಾಸ್ಪದವಾಗಿ ಬಾತ್‌ರೂಮಿನಲ್ಲಿ ಪತ್ತೆ

ನಟ ಆದಿತ್ಯ ಸಿಂಗ್ ರಜಪೂತ್ ಮೃತದೇಹ ಅನುಮಾನಾಸ್ಪದವಾಗಿ ಬಾತ್‌ರೂಮಿನಲ್ಲಿ ಪತ್ತೆ

ಮುಂಬೈ: ನಟ, ಮಾಡೆಲ್, ಫೋಟೋಗ್ರಾಫರ್ ಆದಿತ್ಯ ಸಿಂಗ್ ರಜಪೂತ್ (32) ಸಾವನ್ನಪ್ಪಿದ್ದಾರೆ.

ಮೇ 22 ರಂದು ಮುಂಬೈ ಅಪಾರ್ಟ್‌ಮೆಂಟ್‌ನಲ್ಲಿರುವ ತಮ್ಮ ಮನೆಯ ಬಾತ್‌ರೂಮ್‌ನಲ್ಲಿ ಆದಿತ್ಯ ಸಿಂಗ್ ರಜಪೂತ್ ಶವವಾಗಿ ಪತ್ತೆಯಾಗಿದ್ದಾರೆ.

ಮುಂಬೈನ ಅಂಧೇರಿಯ ಅಪಾರ್ಟ್‌ಮೆಂಟ್‌ನಲ್ಲಿ ಆದಿತ್ಯ ಸಿಂಗ್ ರಜಪೂತ್ ವಾಸಿಸುತ್ತಿದ್ದರು. ಬಾತ್‌ರೂಮ್‌ನಲ್ಲಿ ಬಿದ್ದಿದ್ದ ಆದಿತ್ಯ ಸಿಂಗ್ ರಜಪೂತ್ ಅವರನ್ನು ಸ್ನೇಹಿತರೊಬ್ಬರು ಹಾಗೂ ಅಪಾರ್ಟ್‌ಮೆಂಟ್‌ನ ವಾಚ್‌ಮ್ಯಾನ್ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ವೈದ್ಯರು ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.

ರಜಪೂತ್‌ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Join Whatsapp
Exit mobile version