ಚರ್ಚ್’ಗೆ ನುಗ್ಗಿ ಸಂಘಪರಿವಾರದ ಕಾರ್ಯಕರ್ತರು ಪಾದ್ರಿ ಸೇರಿ ಕ್ರಿಶ್ಚಿಯನ್ನರಿಗೆ ಹಲ್ಲೆ: 9 ಮಂದಿ ಆಸ್ಪತ್ರೆಗೆ ದಾಖಲು

ರಾಯ್’ಘಡ್: ಛತ್ತೀಸ್’ಗಢದಲ್ಲಿ ಹೊಸದಾಗಿ ನಿರ್ಮಿಸಲಾದ ಚರ್ಚ್ ಹಾಲ್’ಗೆ ನುಗ್ಗಿದ ಸಂಘಪರಿವಾರದ ಕಾರ್ಯಕರ್ತರು ಅಲ್ಲಿದ್ದ ಪಾದ್ರಿ ಸೇರಿದಂತೆ ಪ್ರಾರ್ಥನೆ ಸಲ್ಲಿಸಲು ಬಂದವರಿಗೆ ಹಲ್ಲೆ ನಡೆಸಿದ ಪರಿಣಾಮ 9 ಮಂದಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಕ್ರಿಶ್ಚಿಯನ್ನರು ಚರ್ಚ್’ನಲ್ಲಿ ಪ್ರಾರ್ಥನೆ ನಿರತರಾಗಿದ್ದಾಗ ಸಂಘಪರಿವಾರದ ಕಾರ್ಯಕರ್ತರ ಗುಂಪೊಂದು ಅಲ್ಲಿಗೆ ನುಗ್ಗಿ ದಾಂಧಲೆ ಆರಂಭಿಸಿದೆ.

- Advertisement -

ಮತಾಂತರ ವಿರೋಧಿ ಕಾನೂನನ್ನು ಜಾರಿಗೊಳಿಸಿರುವ 11 ರಾಜ್ಯಗಳಲ್ಲಿ ಒಂದಾದ ಛತ್ತೀಸ್’ಗಢದಲ್ಲಿ ಕ್ರಿಶ್ಚಿಯನ್ನರ ಮೇಲೆ ನಿರಂತರ ಕಿರುಕುಳ ಮತ್ತು ದೌರ್ಜನ್ಯ ವ್ಯಾಪಕವಾಗುತ್ತಿದೆ ಎಂದು ಆರೋಪ ಕೇಳಿಬಂದಿದೆ.