ವರ್ಗಾವಣೆ ಮಾಡಿಸುವುದಾಗಿ 75 ಲಕ್ಷ ರೂ. ಹಣ ಪಡೆದು ವಂಚನೆ ಆರೋಪ: ಕೋಲಾರ ನಗರಸಭೆ ಸದಸ್ಯ ವಶಕ್ಕೆ

Prasthutha|

ಕೋಲಾರ: ವರ್ಗಾವಣೆ ಮಾಡಿಸುವುದಾಗಿ 75 ಲಕ್ಷ ರೂ. ಹಣ ಪಡೆದು ವಂಚನೆ ಆರೋಪ ಕೇಳಿಬಂದ ಹಿನ್ನೆಲೆ ಕೋಲಾರದ ನಗರಸಭೆ ಸದಸ್ಯನನ್ನು ಗಲ್‌ಪೇಟೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಮಾಡಿದ್ದಾರೆ. ಬೆಂಗಳೂರಿನ ಆಡುಗೋಡಿಯ ಪ್ರತಾಪ್ ನೀಡಿದ ದೂರಿನ ಮೇರೆಗೆ ನಗರಸಭೆ ಸದಸ್ಯ ಮುಬಾರಕ್‌ನನ್ನು ವಶಕ್ಕೆ ಪಡೆಯಲಾಗಿದೆ.

- Advertisement -

ಸಿಎಂ ಸಿದ್ಧರಾಮಯ್ಯ ರಾಜಕೀಯ ಕಾರ್ಯದರ್ಶಿ ಹಾಗೂ ಕಾಂಗ್ರೆಸ್ ಎಂಎಲ್‌ಸಿ ನಸೀರ್ ಅಹ್ಮದ್ ಮೂಲಕ ವರ್ಗಾವಣೆ ಮಾಡಿಸುವುದಾಗಿ ಹೇಳಿದ್ದ. ವರ್ಗಾವಣೆ ಮಾಡಿಸಲು ಒಟ್ಟು 1.5 ಕೋಟಿ ರೂಪಾಯಿ ಕೇಳಿದ್ದು, ಮುಂಗಡವಾಗಿ ಎರಡು ಕಂತಿನಲ್ಲಿ 75 ಲಕ್ಷ ರೂಪಾಯಿ ಪಡೆದುಕೊಂಡಿದ್ದ. ವರ್ಗಾವಣೆ ತಡವಾದ್ದರಿಂದ ದೂರು ನೀಡಿದ್ದು, ಹಣ ವಾಪಸ್ ಕೇಳಿದಕ್ಕೆ ಬೆದರಿಕೆ ಹಾಕಿದ್ದಾರೆಂದು ಪ್ರತಾಪ್ ಆರೋಪ ಮಾಡಿದ್ದಾರೆ.

Join Whatsapp
Exit mobile version