ಪೊಲೀಸ್ ಮೇಲೆ ಹಲ್ಲೆ ಮಾಡಿ ಗಾಜಿನ ಚೂರು ನುಂಗಿದ ಆರೋಪಿ!

Prasthutha|

ಶಿವಮೊಗ್ಗ: ಪ್ರಕರಣವೊಂದರ ಆರೋಪಿಯೊಬ್ಬ ಪೊಲೀಸ್ ಸಿಬ್ಬಂದಿಯ ಮೇಲೆ ಹಲ್ಲೆ ಮಾಡಿ ಗಾಜಿನ ಚೂರು ನುಂಗಿದ ಘಟನೆ ನಗರದ ಶುಭಮಂಗಳ ಸಮುದಾಯ ಭವನದ ಸಮೀಪ ನಡೆದಿದೆ.

ವಿನೋಬಾನಗರ ಠಾಣೆಯ ಪೊಲೀಸ್ ಸಿಬ್ಬಂದಿ ಮಂಜುನಾಥ್ ಮೇಲೆ ಪ್ರಕರಣವೊಂದರ ಆರೋಪಿ ರೂಪೇಶ್ ಎಂಬಾತ ಹಲ್ಲೆ ನಡೆಸಿ ಗಾಜಿನ ಚೂರು ನುಂಗಿದ್ದಾನೆ. ಇಬ್ಬರನ್ನೂ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸ್ ಸಿಬ್ಬಂದಿ ಮಂಜುನಾಥ್ ಅವರು ಆರೋಪಿ ಮೇಲೆ IPC ಸೆಕ್ಷನ್ 397 ಮೇಲೆ ವಾರೆಂಟ್ ಜಾರಿ ಮಾಡಲು ಹೋಗಿದ್ದ ವೇಳೆ ಈ ಘಟನೆ ನಡೆದಿದೆ.

- Advertisement -

ಆರೋಪಿ ರೂಪೇಶ್ ಪೊಲೀಸ್ ಸಿಬ್ಬಂದಿ ಮಂಜುನಾಥ್ ಅವರನ್ನು ಚರಂಡಿಗೆ ತಳ್ಳಿ ಹಾಕಿದ್ದು, ಮಂಜುನಾಥ್ ಅವರಿಗೆ ಗಂಭೀರ ಗಾಯಗಳಾಗಿವೆ. ನಂತರ ಆರೋಪಿಯು ಗಾಜಿನ ಚೂರು ನುಂಗಿದ್ದಾನೆ ಎನ್ನಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಶಿವಮೊಗ್ಗದ ವಿನೋಬಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -