ಮಿಕ್ಸಿ ಸ್ಫೋಟ ಪ್ರಕರಣ| ಆರೋಪಿ ಅನೂಪ್‌ ಕುಮಾರ್‌ ಬಂಧನ

Prasthutha|

ಹಾಸನ: ಇಲ್ಲಿನ ಕುವೆಂಪು ನಗರದ ಡಿಟಿಡಿಸಿ ಕೊರಿಯರ್‌ ಕಚೇರಿಯಲ್ಲಿ ಮಿಕ್ಸಿ ಸ್ಫೋಟ ಪ್ರಕರಣದ ಆರೋಪಿ ಬೆಂಗಳೂರಿನ ಅನೂಪ್‌ ಕುಮಾರ್‌ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

- Advertisement -

ತನ್ನ ಪ್ರೀತಿಗೆ ಸಹಕರಿಸದ ಮಹಿಳೆಯನ್ನು ಕೊಲೆ ಮಾಡಲು ಆರೋಪಿ ಅನೂಪ್‌ ಕುಮಾರ್ ಮಿಕ್ಸಿಯಲ್ಲಿ  ಡಿಟೋನೇಟರ್‌ ಅಳವಡಿಸಿ ಕೊರಿಯರ್‌ ಕಳುಹಿಸಿದ್ದು, ಕೊರಿಯರ್ ಆಫೀಸಿನಲ್ಲಿ ಮಿಕ್ಸಿ ಸ್ಫೋಟಗೊಂಡು ಓರ್ವ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ.

ತನ್ನ ಪ್ರೀತಿಗೆ ಸಹಕರಿಸದ ಮಹಿಳೆಯ ಮೇಲೆ ದ್ವೇಷ  ಸಾಧಿಸಲು ಆರಂಭಿಸಿದ್ದ ಅನೂಪ್‌ ಕುಮಾರ್‌ ಆಕೆಯನ್ನು ಕೊಲೆ ಮಾಡುವ ಉದ್ದೇಶದಿಂದಲೇ ಮಿಕ್ಸಿಗೆ  ಡಿಟೋನೇಟರ್‌ ಅಳವಡಿಸಿದ್ದ ಕೊರಿಯರ್‌ ಮೂಲಕ ಕಳುಹಿಸಿದ್ದ ಎನ್ನಲಾಗಿದೆ.

Join Whatsapp
Exit mobile version