ಮಂಗಳೂರು | ಟಿವಿ ನೋಡಲು ಹೋದ 10 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ: ಆರೋಪಿ ಬಂಧನ

Prasthutha|

ಮಂಗಳೂರು: 10 ವರ್ಷದ ಬಾಲಕಿಯೊಬ್ಬಳು ಶಾಲೆ ಮುಗಿಸಿ ಮನೆಗೆ ಬಂದ ನಂತರ ಟಿ ವಿ ನೋಡಲು ಪಕ್ಕದ ಮನೆಗೆ ತೆರಳಿದ್ದ ವೇಳೆ ಯುವಕನೊಬ್ಬ ಲೈಂಗಿಕ ಕಿರುಕುಳ ನೀಡಿದ ಘಟನೆ ನಡೆದಿದೆ.

- Advertisement -

ಬಾಲಕಿಯ ನೆರೆ ಮನೆಯ ನಿತೇಶ್ ರಿತಿನ್ @ ನಿತಿನ್ (19) ಎಂಬವನು ಈ ಕೃತ್ಯವೆಸಗಿದವನು. ಬಾಲಕಿ 4ನೇ ತರಗತಿ ವ್ಯಾಸಂಗ ಮಾಡುತ್ತಿದ್ದು ಶಾಲೆ ಮುಗಿದ ಬಳಿಕ ಪಕ್ಕದ ಮನೆಗೆ ಟಿವಿ ನೋಡಲು ಬಂದಿದ್ದಳು.

ಈತ ಮನೆಗೆ ಬಂದ ಹೆಣ್ಣು ಮಗುವಿಗೆ ಲೈಂಗಿಕ ಕಿರುಕುಳ ನೀಡಿದ್ದು, ಈ ವೇಳೆ ಬಾಲಕಿ ಹೆದರಿ ಅಲ್ಲಿಂದ ಓಡಿ ತನ್ನ ಮನೆಗೆಯೊಳಗಡೆಗೆ ಹೋಗಿದ್ದಾಳೆ.

- Advertisement -

ಆರೋಪಿ‌ ಬಾಲಕಿಯ ಮನೆಯೊಳಗೆ ಅಕ್ರಮ ಪ್ರವೇಶಿಸಿ ನಡೆದ ವಿಚಾರವನ್ನು ಯಾರಿಗಾದರೂ ತಿಳಿಸಿದರೆ ಸಾಯಿಸುತ್ತೆನೆ ಎಂಬುದಾಗಿ ಜೀವ ಬೆದರಿಕೆ ಯನ್ನು ಹಾಕಿದ್ದಾನೆ.

ಈ ಬಗ್ಗೆ ಲಿಖಿತ ದೂರು ನೀಡಿದಂತೆ ಉರ್ವ ಪೊಲೀಸ್ ಠಾಣೆಯಲ್ಲಿ ಅ ಕ್ರ 02/2022 ಕಲಂ 354,447,506, ಐ ಪಿಸಿ ಹಾಗೂ ಕಲಂ 7,8 ಪೋಕ್ಸೋ ಕಾಯ್ದೆ ಯಂತೆ ಪ್ರಕರಣ ದಾಖಿಲಿಸಿಕೊಂಡು ಆರೋಪಿಯನ್ನು ‌ಪೊಲೀಸರು ಬಂಧಿಸಿದ್ದಾರೆ.

Join Whatsapp