Home ಟಾಪ್ ಸುದ್ದಿಗಳು ಗುಡಿಸಲಿಗೆ ಆಕಸ್ಮಿಕ ಬೆಂಕಿ; ಏಳು ಮಂದಿ ಸಜೀವ ದಹನ

ಗುಡಿಸಲಿಗೆ ಆಕಸ್ಮಿಕ ಬೆಂಕಿ; ಏಳು ಮಂದಿ ಸಜೀವ ದಹನ

ಲುಧಿಯಾನ: ಗುಡಿಸಲಿನಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಒಂದೇ ಕುಟುಂಬದ ಏಳು ಮಂದಿ ಸಜೀವ ದಹನಗೊಂಡ ಘಟನೆ ಪಂಜಾಬ್‌ನ ಲುಧಿಯಾನ ಬಳಿ ನಡೆದಿದೆ.

ಮೃತರು ವಲಸೆ ಕಾರ್ಮಿಕರಾಗಿದ್ದು, ಇಲ್ಲಿನ ಟಿಬ್ಬಾ ರಸ್ತೆಯಲ್ಲಿರುವ ಪಾಲಿಕೆಯ ಕಸದ ಡಂಪಿಂಗ್ ಯಾರ್ಡ್ ಬಳಿಯ ತಮ್ಮ ಗುಡಿಸಲಿನಲ್ಲಿ ಮಲಗಿದ್ದ ಸಂದರ್ಭ ಈ ದುರ್ಘಟನೆ ಸಂಭವಿಸಿದೆ ಎಂದು ಲುಧಿಯಾನ ಎಸಿಪಿ ಸುರೀಂದರ್ ಸಿಂಗ್ ಹೇಳಿದ್ದಾರೆ.

ದಂಪತಿ ಮತ್ತು ಅವರ ಐದು ಮಕ್ಕಳು ಮೃತಪಟ್ಟಿದ್ದಾರೆ. ಅಗ್ನಿ ಅವಘಡಕ್ಕೆ ಕಾರಣ ಇನ್ನೂ ತಿಳಿದುಬಂದಿಲ್ಲ ಎಂದು ಟಿಬ್ಬಾ ಪೊಲೀಸ್ ಠಾಣೆಯ ಠಾಣಾಧಿಕಾರಿ ರಣಬೀರ್ ಸಿಂಗ್ ಹೇಳಿದ್ದಾರೆ.

Join Whatsapp
Exit mobile version