Home ಟಾಪ್ ಸುದ್ದಿಗಳು ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್ ಮೇಲೆ ಭೀಕರ ಅಪಘಾತ: ಓರ್ವ ಸಾವು, ಇಬ್ಬರಿಗೆ ಗಾಯ

ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್ ಮೇಲೆ ಭೀಕರ ಅಪಘಾತ: ಓರ್ವ ಸಾವು, ಇಬ್ಬರಿಗೆ ಗಾಯ

ಬೆಂಗಳೂರು: ನಗರದ ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್ ಮೇಲೆ ಭೀಕರ ಅಪಘಾತ ಸಂಭವಿಸಿದೆ.

ಘಟನೆಯಲ್ಲಿ ಓರ್ವ ಮೃತಪಟ್ಟಿದ್ದು, ಇಬ್ಬರಿಗೆ ಗಂಭೀರ ಗಾಯಗಳಾಗಿವೆ. ರಾತ್ರಿ 11.20ರ ಸಮಯದಲ್ಲಿ ಬೊಲೆರೊ ಪಿಕಪ್ ವಾಹನಕ್ಕೆ ಹಿಂಬದಿಯಿಂದ ಕ್ಯಾಂಟರ್ ಗುದ್ದಿದ್ದು ಅಪಘಾತ ಸಂಭವಿಸಿದೆ. ಬೊಲೆರೊ ಪಿಕಪ್ ವಾಹನದಲ್ಲಿದ್ದ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ್ದು ಬೊಲೆರೊ ಚಾಲಕ ಹರೀಶ್, ಕ್ಯಾಂಟರ್ ಚಾಲಕನಿ​​ಗೆ ಗಾಯಗಳಾಗಿವೆ. ಇಬ್ಬರು ಗಾಯಾಳುಗಳಿಗೆ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಬೊಲೆರೊ ಪಿಕಪ್ ವಾಹನ ಕೆಟ್ಟು ನಿಂತಿತ್ತು. ಹೀಗಾಗಿ ಟೋಯಿಂಗ್ ವಾಹನ ಅದನ್ನು ಟೋ ಮಾಡಿಕೊಂಡು ತೆರಳುತ್ತಿತ್ತು. ಈ ವೇಳೆ ಕ್ಯಾಂಟರ್ ಹಿಂಬದಿಯಿಂದ ಬಂದು ಗುದ್ದಿದೆ. ಕ್ಯಾಂಟರ್​ನಲ್ಲೇ ಸಿಲುಕಿ ಚಾಲಕ ಮನ್ಸೂರ್ ಒದ್ದಾಡಿದ್ದಾರೆ. ಸದ್ಯ ಕ್ರೇನ್ ಸಹಾಯದಿಂದ ಗಾಯಾಳು ರಕ್ಷಣೆ ಮಾಡಲಾಗಿದೆ. ಇನ್ನು ರಾತ್ರಿ ನಡೆದ ಈ ಘಟನೆಯಿಂದ ಎಲೆಕ್ಟ್ರಾನಿಕ್ ಸಿಟಿ ಫ್ಲೈ ಓವರ್ ಮೇಲೆ ಟ್ರಾಫಿಕ್ ಜಾಮ್ ಉಂಟಾಗಿತ್ತು. ವಾಹನಗಳು ಸಾಲುಗಟ್ಟಿ ನಿಂತಿದ್ದವು. ಪೊಲೀಸರು ಅಪಘಾತ ವಾಹನ ತೆರವು ಮಾಡಿ ವಾಹನಗಳಿಗೆ ಮುಂದೆ ಸಾಗಲು ಅನುವು ಮಾಡಿಕೊಟ್ಟರು. ಸುಮಾರು ಒಂದೂವರೆ ಗಂಟೆಗಳ ಕಾಲ ಸ್ಥಳದಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು.

Join Whatsapp
Exit mobile version