Home ಟಾಪ್ ಸುದ್ದಿಗಳು ಸೌದಿಯಲ್ಲಿ ಅಪಘಾತ: ಉಳ್ಳಾಲ ಮೂಲದ ತಾಯಿ, ಮಗು ಮೃತ್ಯು

ಸೌದಿಯಲ್ಲಿ ಅಪಘಾತ: ಉಳ್ಳಾಲ ಮೂಲದ ತಾಯಿ, ಮಗು ಮೃತ್ಯು

ಉಳ್ಳಾಲ: ಸೌದಿ ಅರೇಬಿಯಾದ ದಮಾಮ್‌ ಬಳಿ ಶುಕ್ರವಾರ ಸಂಜೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಉಳ್ಳಾಲ ನಿವಾಸಿಯಾಗಿದ್ದ ತಾಯಿ ಹಾಗೂ ಮಗು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮೃತರನ್ನು ಹೈದರ್‌ ಉಳ್ಳಾಲ್‌ ಅವರ ಪುತ್ರಿ ಸಫಾ ಫಾತಿಮಾ (30) ಹಾಗೂ ಆಕೆಯ ಎರಡೂವರೆ ವರ್ಷದ ಮಗ ಲಯನ್‌ ಎಂದು ಗುರುತಿಸಲಾಗಿದೆ

ಮದೀನದಿಂದ ಕಾರಿನಲ್ಲಿ ಸಫಾ ಅವರು ಪತಿ ಮಲಪುರಂ ಆರಿ ಕೋಡ್‌ ಸ್ವದೇಶಿ ಸುಹೈಲ್‌ (35) ಮತ್ತು ಸಹೋದರ ಮುಹವಿಯ (23) ಜತೆಗೆ ದಮಾಮ್ ನಲ್ಲಿರುವ ಹೈದರ್‌ ಅವರ ಮನೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಅಪಘಾತ ಸಂಭವಿಸಿದೆ.

ಸುಹೈಲ್‌, ಮಕ್ಕಳಾದ ಅಬ್ದುಲ್‌ ಮಲಿಕ್‌ (7), ಅಬ್ದುಲ್‌ ರಹಿಮಾನ್‌ (6), ಅಹ್ಮದ್‌ (5), ಮುಹವಿಯ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.

Join Whatsapp
Exit mobile version