Home ಟಾಪ್ ಸುದ್ದಿಗಳು ಅಚ್ಛೇ ದಿನ್ ಬರಲಿದೆ, ಪ್ರಧಾನಿ ಮೋದಿ ನಿರ್ಗಮಿಸುತ್ತಾರೆ: ಕೇಜ್ರಿವಾಲ್

ಅಚ್ಛೇ ದಿನ್ ಬರಲಿದೆ, ಪ್ರಧಾನಿ ಮೋದಿ ನಿರ್ಗಮಿಸುತ್ತಾರೆ: ಕೇಜ್ರಿವಾಲ್

ನವದೆಹಲಿ: ದೇಶದಲ್ಲಿ ಒಳ್ಳೆಯ ದಿನ ಬರಲಿದೆ ಏಕೆಂದರೆ ಪ್ರಧಾನಿ ನರೇಂದ್ರ ಮೋದಿ ಅವರು ನಿರ್ಗಮಿಸುತ್ತಾರೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹೇಳಿದ್ದಾರೆ.


ಪೂರ್ವ ದೆಹಲಿಯ ಗಾಂಧಿ ನಗರ ಲೋಕಸಭಾ ಕ್ಷೇತ್ರದಲ್ಲಿ ನಡೆದ ಚುನಾವಣಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ಮೋದಿ ಅವರ ಸರ್ಕಾರ ರಚನೆಯಾಗುವುದಿಲ್ಲ. ಅವರ ಆಡಳಿತಾವಧಿಯಲ್ಲಿನ ಹಣದುಬ್ಬರ ಮತ್ತು ನಿರುದ್ಯೋಗದಿಂದಾಗಿ ಜನರು ಬಿಜೆಪಿ ಮೇಲೆ ಕೋಪಗೊಂಡಿದ್ದಾರೆ. ಜನರು ಅವರ ಪಕ್ಷವನ್ನು ಕಿತ್ತೊಗೆಯಲು ನಿರ್ಧರಿಸಿದ್ದಾರೆ. ಜೂನ್ 4ರಂದು ಒಳ್ಳೆಯ ದಿನ ಬರಲಿದೆ ಏಕೆಂದರೆ ಪ್ರಧಾನಿ ಮೋದಿ ಅವರು ನಿರ್ಗಮಿಸುತ್ತಾರೆ’ (ಅಚ್ಛೇ ದಿನ್ ಆನೇ ವಾಲೇ ಹೈ, ಮೋದಿ ಜೀ ಜಾನೇ ವಾಲೇ ಹೈ) ಎಂದು ಹೇಳಿದ್ದಾರೆ

Join Whatsapp
Exit mobile version