ನವದೆಹಲಿ: ಕೇಂದ್ರ ಸರ್ಕಾರ ಎಲ್ ಪಿಜಿ ಸಿಲಿಂಡರ್ ನ ಬೆಲೆಯನ್ನು ಹೆಚ್ಚಿಸುವ ಮೂಲಕ ಗ್ರಾಹಕರಿಗೆ ಶಾಕ್ ನೀಡಿದೆ. ವಾಣಿಜ್ಯ ಸಿಲಿಂಡರ್’ಗಳ ಬೆಲೆಯನ್ನು 350.50 ರೂಪಾಯಿಗೆ ಏರಿಸಲಾಗಿದ್ದು, ಗೃಹಬಳಕೆಯ ಸಿಲಿಂಡರ್ ದರ 50 ರೂಪಾಯಿಗೆ ಏರಿಕೆ ಮಾಡಿದೆ.
ಭಾರೀ ದರ ಏರಿಕೆಯಾಗುವ ಮೂಲಕ ಜನಸಮಾನ್ಯರಿಗೆ ಬಿಸಿಯಾಗಿದೆ.
ಪರಿಷ್ಕೃತ ದರಗಳ ಪ್ರಕಾರ ವಾಣಿಜ್ಯ ಎಲ್ ಪಿ ಜಿ ಸಿಲಿಂಡರ್ ಗಳು ದೆಹಲಿಯಲ್ಲಿ ಪ್ರತಿ ಯೂನಿಟ್ ಗೆ 2,119.50 ರೂ. ಹಾಗೂ ಗೃಹ ಬಳಕೆಯ ಸಿಲಿಂಡರ್ ಬೆಲೆ ಪ್ರತಿ ಯೂನಿಟ್ ಗೆ 1,103 ರೂ. ಆಗಿದೆ. ಅದೇ ರೀತಿ ಬೆಂಗಳೂರಿನಲ್ಲಿ ಗೃಹಬಳಕೆಯ ಸಿಲಿಂಡರ್ ಬೆಲೆ 1,055.50 ರೂ. ಆಗಿದೆ.
ಈ ಎಲ್ಲಾ ಹೊಸ ದರಗಳು ಇಂದಿನಿಂದ ಜಾರಿಗೆ ಬರಲಿದೆ.