Home ಟಾಪ್ ಸುದ್ದಿಗಳು ಅಚ್ಛೇ ದಿನ್..!: ದುಬಾರಿಯಾಯ್ತು ಮೊಟ್ಟೆ

ಅಚ್ಛೇ ದಿನ್..!: ದುಬಾರಿಯಾಯ್ತು ಮೊಟ್ಟೆ

ಬೆಂಗಳೂರು: ಕೋಳಿ ಮೊಟ್ಟೆ ಬೆಲೆ ಏರಿಕೆಯತ್ತ ಮುಖಮಾಡಿದ್ದು, ಅಂಗಡಿಗಳಲ್ಲಿ ಒಂದು ಮೊಟ್ಟೆಗೆ 7 ರಿಂದ 8 ರೂಪಾಯಿ ವರೆಗೆ ಮಾರಾಟವಾಗುತ್ತಿದೆ.


ಮೊಟ್ಟೆಯ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವುದು ಮೊಟ್ಟೆ ಪ್ರಿಯರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.


ಕೋಳಿಗಳಿಗೆ ನೀಡುವ ಆಹಾರದ ಬೆಲೆ ಏರಿಕೆಯಾದ ಪರಿಣಾಮ ಸಹಜವಾಗಿಯೇ ಮೊಟ್ಟೆಗಳು ದುಬಾರಿ ಎನಿಸಿವೆ. 2021ರ ಜನವರಿಯಲ್ಲಿ 100 ಮೊಟ್ಟೆಗಳ ಒಂದು ಬ್ಯಾಚ್’ಗೆ 437.06 ರೂಪಾಯಿ ನಿಗದಿಯಾಗಿತ್ತು. ಕಳೆದ ವರ್ಷ ಜನವರಿಯಲ್ಲಿ 100 ಮೊಟ್ಟೆಗಳ ಒಂದು ಬ್ಯಾಚ್’ಗೆ 437.58 ರೂಪಾಯಿ ಇತ್ತು. ಆದರೆ ಈ ಬಾರಿ 100 ಮೊಟ್ಟೆಗಳ 1 ಬ್ಯಾಚ್’ಗೆ ಹೋಲ್ ಸೇಲ್ ರೂಪದಲ್ಲಿ ಬರೋಬ್ಬರಿ 575 ರೂಪಾಯಿ ಆಗಿದೆ.

Join Whatsapp
Exit mobile version