Home ಟಾಪ್ ಸುದ್ದಿಗಳು ಬೆಸ್ಕಾಂ ಇಇ ಲಕ್ಷ್ಮೀಶ್ ನಿವಾಸಗಳ ಮೇಲೆ ಎಸಿಬಿ ದಾಳಿ

ಬೆಸ್ಕಾಂ ಇಇ ಲಕ್ಷ್ಮೀಶ್ ನಿವಾಸಗಳ ಮೇಲೆ ಎಸಿಬಿ ದಾಳಿ

ಬೆಂಗಳೂರು: ಆದಾಯಕ್ಕಿಂತ ಹೆಚ್ಚಿನ ಆಸ್ತಿ-ಪಾಸ್ತಿ ಗಳಿಸಿದ ಆರೋಪದ ಹಿನ್ನೆಲೆಯಲ್ಲಿ ಬೆಸ್ಕಾಂ ಕಾರ್ಯಪಾಲಕ ಅಭಿಯಂತರ(ಇಇ) ಎಲ್.ಎಸ್.ಲಕ್ಷ್ಮೀಶ್ ಅವರ ಎರಡು ಮನೆಗಳ ಮೇಲೆ ಭ್ರಷ್ಟಾಚಾರ ನಿಗ್ರಹ ದಳ-ಎಸಿಬಿ ಅಧಿಕಾರಿಗಳು ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ.

ಇಇ  ಎಲ್.ಎಸ್.ಲಕ್ಷ್ಮೀಶ್ ಅವರ ಮಾಗಡಿ ರಸ್ತೆಯ ಪ್ರೆಸ್ಟೀಜ್ ವುಡ್ಸ್ ಅಪಾರ್ಟ್ಮೆಂಟ್ ನ ವಾಸದ ಮನೆ ಹಾಗೂ ಅರಸಿಕೆರೆ ತಾಲೂಕಿನ ಮನೆ ಸೇರಿ ಎರಡು ದಾಳಿ ನಡೆಸಿ ಶೋಧ ನಡೆಸಲಾಗಿದೆ ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.

ಲಕ್ಷ್ಮೀಶ್ ಅವರು ಆದಾಯಕ್ಕೂ ಮೀರಿ ಆಸ್ತಿ-ಪಾಸ್ತಿಗಳನ್ನು ಹೊಂದಿರುವ ಬಗ್ಗೆ ವಿಶ್ವಾಸಾರ್ಹ ಮಾಹಿತಿ ಸಂಗ್ರಹಿಸಿ ಅಕ್ರಮ ಆಸ್ತಿ ಗಳಿಕೆ ಪ್ರಕರಣಗಳನ್ನು ದಾಖಲಿಸಿ ಶೋಧ ನಡೆಸಲಾಗಿದೆ. ಶೋಧನಾ ಕಾರ್ಯವು ಇಂದು ಬೆಳಿಗ್ಗೆಯಿಂದ ಆರಂಭಗೊಂಡು ಮಧ್ಯಾಹ್ನದವರೆಗೂ  ಮುಂದುವರೆದಿದ್ದು ಪರಿಶೀಲನೆ ನಡೆಸಲಾಗಿದೆ.

Join Whatsapp
Exit mobile version