ಮಂಗಳೂರು: ಮಂಗಳೂರು ವಿಶ್ವ ವಿದ್ಯಾನಿಲಯ ಕಾಲೇಜಿನ ತರಗತಿಯೊಳಗೆ ಸಾವರ್ಕರ್ ಫೋಟೊ ಅಳವಡಿಸಿ ವಿವಾದ ಸೃಷ್ಟಿಯಾಗಿತ್ತು. ಬಳಿಕ ಕಾಲೇಜು ಪ್ರಾಂಶುಪಾಲೆ ಸಾವರ್ಕರ್ ಫೋಟೋವನ್ನು ತೆಗೆದು ಹಾಕಿದ್ದರು. ಇದೀಗ ಪ್ರಾಂಶುಪಾಲೆಗೆ ಸಾವರ್ಕರ್ ಫೋಟೋ ಅಳವಡಿಸಿರುವ ಕುರಿತು ದೂರನ್ನು ನೀಡಿದ್ದ ವಿದ್ಯಾರ್ಥಿಗಳಿಗೆ ಎಬಿವಿಪಿ ಪುಂಡರು ಹಲ್ಲೆ ನಡೆಸಿದ್ದಾರೆ.
ಪ್ರಾಂಶುಪಾಲೆಗೆ ದೂರು ನೀಡಿದ್ದನ್ನೇ ನೆಪವಾಗಿಸಿದ ಎಬಿವಿಪಿ ಕಾರ್ಯಕರ್ತರು, ಮೂವರು ಮುಸ್ಲಿಂ ವಿದ್ಯಾರ್ಥಿಗಳಿಗೆ ಹಲ್ಲೆ ನಡೆಸಿದ್ದಾರೆ. ಇದೀಗ ಗಾಯಗೊಂಡಿರುವ ವಿದ್ಯಾರ್ಥಿಗಳನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಳೆದ ಬುಧವಾರ ನಗರದ ಹಂಪನೆಕಟ್ಟೆಯಲ್ಲಿರುವ ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ತರಗತಿಯೊಂದರಲ್ಲಿ ಸಾವರ್ಕರ್ ಮತ್ತು ಭಾರತಮಾತೆಯ ಫೋಟೋವನ್ನು ಅಳವಡಿಸುವ ವೀಡಿಯೋ ವೈರಲ್ ಆಗಿತ್ತು. ಅಳವಡಿಸಿದ ಕೆಲಕ್ಷಣದಲ್ಲೇ ಕಾಲೇಜು ಪ್ರಾಂಶುಪಾಲೆ ಫೋಟೋವನ್ನು ತೆರವುಗೊಳಿಸಿದ್ದರು.