Home ಟಾಪ್ ಸುದ್ದಿಗಳು ಅಮಾಯಕ ಮುಸ್ಲಿಂ ವಿದ್ಯಾರ್ಥಿ ಮೇಲೆ ಹಲ್ಲೆ ನಡೆಸಿದ ABVP ಕಾರ್ಯಕರ್ತರು

ಅಮಾಯಕ ಮುಸ್ಲಿಂ ವಿದ್ಯಾರ್ಥಿ ಮೇಲೆ ಹಲ್ಲೆ ನಡೆಸಿದ ABVP ಕಾರ್ಯಕರ್ತರು

ಹಲ್ಲೆಗೊಳಗಾದ ವಿದ್ಯಾರ್ಥಿಯನ್ನು ಆಸ್ಪತ್ರೆಗೆ ಸಾಗಿಸಿ ಅರೊಪಿಗಳ ವಿರುದ್ದ ಕೇಸು ದಾಖಲಿಸಿದ SDPI ನಿಯೋಗ

ಕೊಡಗು : ಜಿಲ್ಲೆಯ ಕುಶಾಲನಗರದಲ್ಲಿ ಸರಕಾರಿ ಪಾಲಿಟೆಕ್ನಿಕ್ ಕಾಲೇಜಿನ ಮುಸ್ಲಿಮ್ ವಿದ್ಯಾರ್ಥಿಗೆ ABVP ಕಾರ್ಯಕರ್ತರು ಹಲ್ಲೆ ನಡೆಸಿದ ಘಟನೆ ನಡೆದಿದೆ.

ಸಾದಿಕ್ ಎಂಬ ವಿದ್ಯಾರ್ಥಿಯನ್ನು ಮುಸ್ಲಿಂ ಎಂಬ ಕಾರಣಕ್ಕೆ ABVP ಕಾರ್ಯಕರ್ತರು ಕೆಲವು ದಿನಗಳಿಂದ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದು, ಈ ಕುರಿತು ಕಾಲೇಜಿನ ಪ್ರಾಂಶುಪಾಲರ ಬಳಿ ದೂರು ನೀಡಿದ ನೆಪದಲ್ಲಿ ಕಾಲೇಜಿನ ABVP ಕಾರ್ಯಕರ್ತರು ವಿದ್ಯಾರ್ಥಿಗೆ ಹಲ್ಲೆ ನಡೆಸಿದ್ದಾರೆ,

ಹಲ್ಲೆಗೊಳಗಾದ ವಿದ್ಯಾರ್ಥಿಯನ್ನು SDPI ಕಾರ್ಯಕರ್ತರು ಅಸ್ಪತ್ರೆಗೆ ದಾಖಲಿಸಿ ಅರೋಪಿಗಳ ವಿರುದ್ಧ ಕೇಸು ದಾಖಲಿಸಿದ್ದಾರೆ.

ಜಿಲ್ಲೆಯಲ್ಲಿ ಪದೇ ಪದೇ ವಿದ್ಯಾರ್ಥಿಗಳ ಮೇಲೆ‌ ಹಲ್ಲೆ ಪ್ರಕರಣಗಳು ಮುಂದುವರೆಯುತ್ತಿದ್ದು, ಪೊಲೀಸ್ ಇಲಾಖೆಯ ಜಾಣ‌ ಮೌನವು ಇದಕ್ಕೆ  ಪುಷ್ಟಿ ನೀಡುವಂತಿದೆ. ಕುಶಾಲನಗರ ಕಾಲೇಜಿನಲ್ಲಿ ನಡೆದಿರುವ ಘಟನೆಯ ಎಲ್ಲಾ ಆರೋಪಿಗಳನ್ನು ಶೀಘ್ರವಾಗಿ ಬಂಧಿಸಿ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು SDPI ಒತ್ತಾಯಿಸಿದೆ.

Join Whatsapp
Exit mobile version