ಮಗುವಿಗೆ ಲೈಂಗಿಕ ಕಿರುಕುಳ ನೀಡಿ ಫಿಶ್ ಟ್ಯಾಂಕ್ ಒಳಗೆ ಹಾಕಿದ್ದ ದುರುಳನ ಬಂಧನ

Prasthutha|

ಮಂಗಳೂರು: ಎರಡು ವರ್ಷದ ಮಗುವಿನ ಮೇಲೆ ಲೈಂಗಿಕ ಕಿರುಕುಳ ನೀಡಿದ ಅಮಾನವೀಯ ಘಟನೆ ಮಂಗಳೂರಿನಲ್ಲಿ ನಡೆದಿದ್ದು, ಆರೋಪಿಯನ್ನು ಬಂಧಿಸಲಾಗಿದೆ.

- Advertisement -


ಲೈಂಗಿಕ ಕಿರುಕುಳ ನೀಡಿದ ಆರೋಪಿ ಬಿಹಾರ ಮೂಲದ ಚಂದನ್ (38) ಎಂಬಾತನನ್ನು ಮಂಗಳೂರು ನಗರದ ಪಾಂಡೇಶ್ವರ ಪೊಲೀಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಆರೋಪಿ ಚಂದನ್ ಮಗುವನ್ನು ಅಪಹರಿಸಿ ಲೈಂಗಿಕ ಕಿರುಕುಳ ನೀಡಿದ್ದ. ಮಾತ್ರವಲ್ಲ ಬಳಿಕ ಮಗುವನ್ನು ಫಿಶ್ ಟ್ಯಾಂಕ್ ಒಳಗೆ ಹಾಕಿದ್ದ. ಸದ್ಯ ಮಗುವಿಗೆ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.


ಮಗುವನ್ನು ಪೋಷಕರು ಹುಡುಕಿದಾಗ ಟ್ಯಾಂಕ್ ಒಳಗೆ ಇರುವುದು ಪತ್ತೆಯಾಗಿದೆ. ತೀವ್ರ ಅಸ್ವಸ್ಥವಾಗಿದ್ದ ಮಗುವನ್ನು ಆಸ್ಪತ್ರೆಗೆ ದಾಖಲಿಸಿದ್ದ ಪೋಷಕರು ಪೊಲೀಸರಿಗೆ ದೂರು ನೀಡಿದ್ದರು.
ಸದ್ಯ ಮಗುವಿನ ಆರೋಗ್ಯದಲ್ಲಿ ಚೇತರಿಕೆ ಕಂಡಿದ್ದು, ಪ್ರಾಣಾಪಾಯದಿಂದ ಪಾರಾಗಿದೆ. ಪೋಕ್ಸೊ ಕಾಯಿದೆಯಡಿ ಪ್ರಕರಣ ದಾಖಲು ಮಾಡಲಾಗಿದೆ.

Join Whatsapp
Exit mobile version