Home ಕರಾವಳಿ ಇಸ್ಲಾಂ ಧರ್ಮದ ವಿರುದ್ಧ ನಿಂದನೆ: ಕಾನೂನು ಕ್ರಮಕ್ಕೆ ಆಗ್ರಹಿಸಿ ಮುಸ್ಲಿಮ್ ಒಕ್ಕೂಟಯಿಂದ ದೂರು ದಾಖಲು

ಇಸ್ಲಾಂ ಧರ್ಮದ ವಿರುದ್ಧ ನಿಂದನೆ: ಕಾನೂನು ಕ್ರಮಕ್ಕೆ ಆಗ್ರಹಿಸಿ ಮುಸ್ಲಿಮ್ ಒಕ್ಕೂಟಯಿಂದ ದೂರು ದಾಖಲು

ವಿಟ್ಲ: ಸೋಮವಾರ ವಿಟ್ಲದಲ್ಲಿ ನಡೆದ ಹಿಂದೂ ಜಾಗೃತಿ ಕಾರ್ಯಕ್ರಮದಲ್ಲಿ ರಾಧಾಕೃಷ್ಣ ಅಡ್ಯಂತಾಯ ಎಂಬ ಹಿಂಜಾವೇ ಮುಖಂಡ ಇಸ್ಲಾಮ್ ಧರ್ಮವನ್ನು ನಿಂದಿಸಿ ಅವಹೇಳನ ಮಾಡಿದ್ದು, ಇದು ಸಮಾಜದಲ್ಲಿ ಅಶಾಂತಿಯನ್ನು ಸೃಷ್ಟಿಸಲು ಕಾರಣವಾಗಿದೆ. ಆದ್ದರಿಂದ ರಾಧಾಕೃಷ್ಣ ಅಡ್ಯಂತಾಯ ಹಾಗೂ ಕಾರ್ಯಕ್ರಮ ಸಂಘಟಕರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ವಿಟ್ಲ ಮುಸ್ಲಿಮ್ ಒಕ್ಕೂಟದ ಪದಾಧಿಕಾರಿಗಳು ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ನಿಯೋಗದಲ್ಲಿ ವಿಟ್ಲ ಮುಸ್ಲಿಂ ಒಕ್ಕೂಟದ ಗೌರವಾಧ್ಯಕ್ಷ ಎಂ.ಎಸ್ ಮುಹಮ್ಮದ್, ಅಧ್ಯಕ್ಷರಾದ ವಿ.ಎಚ್ ಅಶ್ರಫ್ ಹಾಗೂ ಸಮಿತಿ ಸದಸ್ಯರಾದ ಶಾಕೀರ್ ಅಳಕೆಮಜಲು, ಸುಲೈಮಾನ್ ಒಕ್ಕೆತ್ತೂರು ಮತ್ತು ಪದಾಧಿಕಾರಿಗಳು ಇದ್ದರು.

Join Whatsapp
Exit mobile version