►ಭಾರತಕ್ಕಿದೆಯೇ ಅಬುಧಾಬಿಯ ಹಸಿರು ಪಟ್ಟಿಯಲ್ಲಿ ಸ್ಥಾನ ?
ಅಬುಧಾಬಿ: ಜುಲೈ 1 ರಿಂದ ಯುಎಇಯ ಅಬುಧಾಬಿಯಲ್ಲಿ ಪ್ರವಾಸೋದ್ಯಮ ಚಟುವಟಿಕೆಗಳನ್ನು ಪುನರಾರಂಭಿಸಲಾಗುವುದು ಮತ್ತು ಅಂತರರಾಷ್ಟ್ರೀಯ ಪ್ರವಾಸಿಗರಿಗೆ ಈವರೆಗೆ ಇದ್ದ ಕ್ವಾರಂಟೈನ್ ನಿಯಮವಿಲ್ಲದೆ ರಾಜ್ಯವನ್ನು ಪ್ರವೇಶಿಸಬಹುದಾಗಿದೆ ಎಂದು ಅಧಿಕಾರಿಗಳು ಭಾನುವಾರ ಬಹಿರಂಗಪಡಿಸಿದ್ದಾರೆ ಎಂದು ಅರೇಬಿಕ್ ದಿನಪತ್ರಿಕೆ ‘ಎಮರತ್ ಅಲ್ ಯೌಮ್’ ತನ್ನ ವರದಿಯಲ್ಲಿ ತಿಳಿಸಿದೆ. ಪ್ರಸ್ತುತ ಜಾರಿಯಲ್ಲಿರುವ ನಿಯಮಗಳ ಪ್ರಕಾರ, ಮೇ 3, 2021 ರಿಂದ, ‘ಹಸಿರು’ ಪಟ್ಟಿಯಲ್ಲಿರುವ ದೇಶಗಳಿಂದ ಬರುವ ಲಸಿಕೆ ಹಾಕಿದ ಪ್ರಯಾಣಿಕರು ಕ್ಯಾರೆಂಟೈನ್ ಮಾಡುವ ಅಗತ್ಯವಿಲ್ಲದೆ, ಆಗಮನದಂದು ಮತ್ತು 6 ನೇ ದಿನದಂದು ಪಿಸಿಆರ್ ಪರೀಕ್ಷೆಯನ್ನು ತೆಗೆದುಕೊಳ್ಳಬೇಕಿತ್ತು.
ಇತರ ದೇಶಗಳಿಂದ ಬರುವ ಲಸಿಕೆ ಹಾಕಿದ ಪ್ರಯಾಣಿಕರು ಆಗಮನದ ಮೇಲೆ ಪಿಸಿಆರ್ ಪರೀಕ್ಷೆಯನ್ನು ತೆಗೆದುಕೊಳ್ಳಬೇಕು. ಐದು ದಿನಗಳವರೆಗೆ ಕ್ಯಾರೆಂಟೈನ್ ಮಾಡಬೇಕು ಮತ್ತು ನಾಲ್ಕನೇ ದಿನ ಮತ್ತೊಂದು ಪಿಸಿಆರ್ ಪರೀಕ್ಷೆಯನ್ನು ತೆಗೆದುಕೊಳ್ಳಬೇಕು. ಕನಿಷ್ಠ 28 ದಿನಗಳ ಹಿಂದೆಯೇ ತಮ್ಮ ಎರಡನೇ ಲಸಿಕೆಯನ್ನು ಸ್ವೀಕರಿಸಿದ ಎಲ್ಲಾ ಯುಎಇ ನಾಗರಿಕರು ಮತ್ತು ಅಬುಧಾಬಿಯ ನಿವಾಸಿಗಳಿಗೆ ಈ ಮೇಲಿನ ನಿಯಮಗಳು ಅನ್ವಯಿಸುತ್ತವೆ, ಆದರೆ ‘ಅಲ್ ಹೊಸ್ನ್’ ಅಪ್ಲಿಕೇಶನ್‌ನಲ್ಲಿನ ಲಸಿಕೆ ಪಡೆದ ಮಾಹಿತಿಯ ದಾಖಲಿಸಿರತಕ್ಕದ್ದು.
ಲಸಿಕೆ ಹಾಕದ ನಾಗರಿಕರು ಮತ್ತು ಅಬುಧಾಬಿಯ ನಿವಾಸಿಗಳು ‘ಹಸಿರು’ ದೇಶಗಳಿಂದ ಆಗಮಿಸುವಾಗ, ಅವರು ಕ್ಯಾರೆಂಟೈನ್ ಮಾಡದೆಯೇ ಆಗಮನದ ಮೇಲೆ ಪಿಸಿಆರ್ ಪರೀಕ್ಷೆಯನ್ನು ತೆಗೆದುಕೊಳ್ಳಬೇಕು, ಜೊತೆಗೆ 6 ಮತ್ತು 12 ದಿನಗಳಲ್ಲಿ ಇತರ ಎರಡು ಪಿಸಿಆರ್ ಪರೀಕ್ಷೆಗಳನ್ನು ತೆಗೆದುಕೊಳ್ಳಬೇಕು. ಲಸಿಕೆ ಹಾಕದ ನಾಗರಿಕರು ಮತ್ತು ಇತರ ದೇಶಗಳಿಂದ ಬರುವ ನಿವಾಸಿಗಳು ಆಗಮನದ ಮೇಲೆ ಪಿಸಿಆರ್ ಪರೀಕ್ಷೆಯನ್ನು ತೆಗೆದುಕೊಳ್ಳಬೇಕು. 10 ದಿನಗಳವರೆಗೆ ಕ್ಯಾರೆಂಟೈನ್ ಮಾಡಬೇಕು ಮತ್ತು ಎಂಟನೇ ದಿನ ಮತ್ತೊಂದು ಪಿಸಿಆರ್ ಪರೀಕ್ಷೆಯನ್ನು ತೆಗೆದುಕೊಳ್ಳಬೇಕು.
ಅಬುದಾಬಿ ಹೆಸರಿಸಿರುವ ಇತ್ತೀಚಿನ ಹಸಿರು ಪಟ್ಟಿ ದೇಶಗಳೆಂದರೆ ಆಸ್ಟ್ರೇಲಿಯಾ, ಭೂತಾನ್, ಬ್ರೂನಿ, ಚೀನಾ, ಕ್ಯೂಬಾ, ಗ್ರೀನ್‌ಲ್ಯಾಂಡ್, ಹಾಂಗ್ ಕಾಂಗ್, ಐಲ್ಯಾಂಡ್, ಇಸ್ರೇಲ್, ಜಪಾನ್, ಮಾರಿಷಸ್, ಮೊರಾಕೊ, ನ್ಯೂಝಿಲೆಂಡ್, ಪೋರ್ಚುಗಲ್, ರಷ್ಯಾ, ಸೌದಿ ಅರೇಬಿಯಾ, ಸಿಂಗಾಪುರ, ದಕ್ಷಿಣ ಕೊರಿಯಾ, ಸ್ವಿಟ್ಜರ್ಲೆಂಡ್, ತೈವಾನ್, ತಝಕಿಸ್ತಾನ್, ಇಂಗ್ಲೆಂಡ್, ಉಜ್ಬೇಕಿಸ್ತಾನ್ ರಾಷ್ಟ್ರಗಳು ಸೇರಿವೆ.