Home ಗಲ್ಫ್ ಸತತ ಆರನೇ ಬಾರಿಗೆ ಜಾಗತಿಕ ಮನ್ನಣೆ| ಅತ್ಯಂತ ಸುರಕ್ಷಿತ ನಗರವಾಗಿ ಅಬುಧಾಬಿ

ಸತತ ಆರನೇ ಬಾರಿಗೆ ಜಾಗತಿಕ ಮನ್ನಣೆ| ಅತ್ಯಂತ ಸುರಕ್ಷಿತ ನಗರವಾಗಿ ಅಬುಧಾಬಿ

ಟಾಪ್ 10 ರಲ್ಲಿ ಕಾಣಿಸಿಕೊಂಡ ದುಬೈ, ಶಾರ್ಜಾ


ಅಬುಧಾಬಿ: ಯುಎಇ ರಾಜಧಾನಿ ಅಬುಧಾಬಿ ಸತತ ಆರನೇ ವರ್ಷವೂ ವಿಶ್ವದ ಅತ್ಯಂತ ಸುರಕ್ಷಿತ ನಗರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಜಾಗತಿಕ ಡೇಟಾಬೇಸ್ ಕಂಪನಿಯಾದ ನಂಬಿಯೊ ಸೇಫ್ಟಿ ಇಂಡೆಕ್ಸ್ ವಿಶ್ವದ 10 ಸುರಕ್ಷಿತ ನಗರಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು,  ವೆಬ್‌ಸೈಟ್ ಮೂಲಕ ಜನರು ನೀಡುವ ಪ್ರತಿಕ್ರಿಯೆಯನ್ನು ಆಧರಿಸಿ ಪಟ್ಟಿಯನ್ನು ರಚಿಸಿದೆ.

ಜೀವನ ವೆಚ್ಚ, ಮಾಲಿನ್ಯ, ಭದ್ರತೆ ಮತ್ತು ಅಪರಾಧದ ಬಗ್ಗೆ ಸಾರ್ವಜನಿಕರ ಅಭಿಪ್ರಾಯಗಳನ್ನು ಸಂಗ್ರಹಿಸಿ ಅಂತಿಮ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.

ಸುರಕ್ಷಿತ ನಗರಗಳಲ್ಲಿ ಯುಎಇ ನಗರಗಳಾದ ಶಾರ್ಜಾ ನಾಲ್ಕನೇ ಸ್ಥಾನ ಮತ್ತು ದುಬೈ ಎಂಟನೇ ಸ್ಥಾನವನ್ನು ಪಡೆದುಕೊಂಡಿದೆ.

ಪಟ್ಟಿಯಲ್ಲಿ ಅಬುಧಾಬಿಯ ಸೇಫ್ಟಿ ಇಂಡೆಕ್ಸ್ 88.4 ಆಗಿದೆ. ಇದರೊಂದಿಗೆ ಅಬುಧಾಬಿ ವಾಸಿಸಲು, ಕೆಲಸ ಮಾಡಲು ಮತ್ತು ಹೂಡಿಕೆ ಮಾಡಲು ವಿಶ್ವದಲ್ಲೇ ಅತ್ಯಂತ ಸುರಕ್ಷಿತ ನಗರವಾಗಿದೆ.

ಅಬುಧಾಬಿಯು ಅಪರಾಧ ಮತ್ತು ಮಾದಕ ವ್ಯಸನದಲ್ಲಿ ಕಳಪೆ ಸ್ಕೋರ್ ಹೊಂದಿದ್ದರೂ ಭದ್ರತೆಯ ವಿಷಯದಲ್ಲಿ ನಗರವು ಅಗ್ರಸ್ಥಾನವನ್ನು ಪಡೆದಿದೆ.

Join Whatsapp
Exit mobile version