Home ಟಾಪ್ ಸುದ್ದಿಗಳು ರಾಜ್ಯಸಭೆ ಉಪ ಚುನಾವಣೆ: ತೆಲಂಗಾಣದಿಂದ ‘ಕೈ’ ಅಭ್ಯರ್ಥಿಯಾಗಿ ಅಭಿಷೇಕ್ ಮನು ಸಿಂಘ್ವಿ ನಾಮಪತ್ರ

ರಾಜ್ಯಸಭೆ ಉಪ ಚುನಾವಣೆ: ತೆಲಂಗಾಣದಿಂದ ‘ಕೈ’ ಅಭ್ಯರ್ಥಿಯಾಗಿ ಅಭಿಷೇಕ್ ಮನು ಸಿಂಘ್ವಿ ನಾಮಪತ್ರ

ಹೈದರಾಬಾದ್: ಹಿಮಾಚಲ ಪ್ರದೇಶದಲ್ಲಿ ಸ್ವಪಕ್ಷೀಯ ಶಾಸಕರ ಅಡ್ಡಮತದಾನದಿಂದ ಪರಾಭವಗೊಂಡಿದ್ದ ಕಾಂಗ್ರೆಸ್ ಅಭ್ಯರ್ಥಿ ಅಭಿಷೇಕ್ ಮನುಸಿಂಘ್ವಿ ಅವರು ರಾಜ್ಯಸಭಾ ಚುನಾವಣೆಗೆ ಈ ಬಾರಿ ತೆಲಂಗಾಣದಿಂದ ಆಯ್ಕೆ ಬಯಸಿ, ನಾಮಪತ್ರ ಸಲ್ಲಿಸಿದ್ದಾರೆ.


ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಮುಖ್ಯಮಂತ್ರಿ ರೇವಂತ ರೆಡ್ಡಿ, ಸಚಿವರು, ತೆಲಂಗಾಣದ ಎಐಸಿಸಿ ಉಸ್ತುವಾರಿ ದೀಪಾ ದಾಸ್ ಮುನ್ಶಿ ಅವರು ಸಿಂಘ್ವಿ ಅವರೊಂದಿಗಿದ್ದರು.


ರಾಜ್ಯಸಭಾ ಚುನಾವಣೆಗೆ ಸಿಂಘ್ವಿ ಅವರ ಹೆಸರನ್ನು ಆಡಳಿತಾರೂಢ ಕಾಂಗ್ರೆಸ್ ಶಾಸಕಾಂಗ ಪಕ್ಷವು ಭಾನುವಾರ ರಾತ್ರಿ ಅಂತಿಮಗೊಳಿಸಿತ್ತು. ಆಡಳಿತಾರೂಢ ಕಾಂಗ್ರೆಸ್ ಬಳಿ ಭಾರಿ ಬಹುಮತವಿದ್ದು, ಈ ಉಪ ಚುನಾವಣೆಯಲ್ಲಿ ಸುಲಭವಾಗಿ ಗೆಲುವು ಸಾಧಿಸಲಿದೆ. ಹೀಗಿದ್ದೂ, ಭಾರತ ರಾಷ್ಟ್ರೀಯ ಸಮಿತಿಯೇನಾದರೂ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೆ, ಸೆಪ್ಟೆಂಬರ್ 3ರಂದು ಚುನಾವಣೆ ನಡೆಯವುದು ಅನಿವಾರ್ಯವಾಗಲಿದೆ.


ಹಿಮಾಚಲ ಪ್ರದೇಶದಲ್ಲಿ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡಮತದಾನವಾದ ಪರಿಣಾಮ ಆಡಳಿತಾರೂಢ ಕಾಂಗ್ರೆಸ್ ಅಭ್ಯರ್ಥಿ ಅಭಿಷೇಕ್ ಮನು ಸಿಂಘ್ವಿ ವಿರುದ್ಧ ಬಿಜೆಪಿ ಅಭ್ಯರ್ಥಿ ಹರ್ಷ್ ಮಹಾಜನ್ ಗೆಲುವು ಸಾಧಿಸಿದ್ದರು.

Join Whatsapp
Exit mobile version