Home ಗಲ್ಫ್ ಕೈಕಂಬ ನಿವಾಸಿ ಅಬ್ದುಲ್ ಹಮೀದ್ ಸೌದಿ ಅರೇಬಿಯಾದಲ್ಲಿ ನಿಧನ

ಕೈಕಂಬ ನಿವಾಸಿ ಅಬ್ದುಲ್ ಹಮೀದ್ ಸೌದಿ ಅರೇಬಿಯಾದಲ್ಲಿ ನಿಧನ

ಸೌದಿ ಅರೇಬಿಯಾ(ಬೀಷಾ): ಸುದೀರ್ಘ ವರ್ಷಗಳಿಂದ ಅನಿವಾಸಿಯಾಗಿದ್ದ ಗುರುಪುರ ಕೈಕಂಬ ನಿವಾಸಿ ಹಮೀದ್ ಎಂಬವರು ಜನವರಿ 21ರಂದು ಅನಾರೋಗ್ಯದಿಂದ ಸೌದಿ ಅರೇಬಿಯಾದ ಬೀಷಾ ಕಿಂಗ್ ಅಬ್ದುಲ್ಲಾ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಕೆಲವು ದಿನಗಳ ಹಿಂದೆಯಷ್ಟೇ ಅನಾರೋಗ್ಯ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೇ ಆಸ್ಪತ್ರೆಯಲ್ಲಿ ಶುಕ್ರವಾರ ಮರಣ ಹೊಂದಿದ್ದಾರೆ.

ಮರಣೋತ್ತರ ಕ್ರಿಯೆಗೆ ಬೇಕಾದ ವ್ಯವಸ್ಥೆ ಕಲ್ಪಿಸಲು ಕೂಡಲೇ ಸ್ಪಂದಿಸಿ ಕಾರ್ಯ ಪ್ರವೃತ್ತರಾದ ISF ಕೇರಳ ಹಾಗೂ ಕರ್ನಾಟಕ ಸಮಿತಿಯವರು, ಭಾರತೀಯ ರಾಯಬಾರಿ ಕಚೇರಿ ಹಾಗೂ ಅಂತ್ಯಕ್ರಿಯೆಗೆ ಊರಿನಿಂದ ಬೇಕಾದ ದಾಖಲೆ ಪತ್ರವನ್ನು ಸರಿಪಡಿಸಿ ಜನವರಿ 24ರಂದು ಅಸರ್ ನಮಾಝ್ ನಂತರ ಸ್ಥಳೀಯ ದಫನ ಭೂಮಿಯಲ್ಲಿ ಅಂತ್ಯಕ್ರಿಯೆ ನಿರ್ವಹಿಸಿದರು.

Join Whatsapp
Exit mobile version