ಬೆಂಗಳೂರು: ಬೆಂಗಳೂರು ಜಿಲ್ಲಾ ಆರೋಗ್ಯಾಧಿಕಾರಿ ಶ್ರೀನಿವಾಸ್ ಲಂಚ ತೆಗೆದುಕೊಳ್ಳುವಾಗ ನೇರವಾಗಿ ಆಪ್ ಕಾರ್ಯಕರ್ತ ಗಳಿಂದ ಸಿಕ್ಕಿಬಿದ್ದಿದ್ದ ಪ್ರಕರಣದ ಕುರಿತಂತೆ ಇಂದು ಬೈಯಪ್ಪನಹಳ್ಳಿಯ ಜಿಲ್ಲಾ ಆರೋಗ್ಯಾಧಿಕಾರಿಗಳ ಕಚೇರಿಯ ಮುಂದೆ ಪಕ್ಷದ ನೂರಾರು ಕಾರ್ಯಕರ್ತರು ಪ್ರತಿಭಟನೆ ನಡೆಸಿ ಕೂಡಲೇ ಆರೋಗ್ಯ ಅಧಿಕಾರಿಗಳನ್ನು ವಜಾಗೊಳಿಸಬೇಕೆಂದು ಒತ್ತಾಯಿಸಿದರು.
ಆರೋಗ್ಯ ಇಲಾಖೆಯ ಜಂಟಿ ನಿರ್ದೇಶಕರು ಧರಣಿ ನಿರತರ ಬಳಿ ದೂರನ್ನು ಸ್ವೀಕರಿಸಿದ ನಂತರ ಪ್ರತಿಭಟನೆಯನ್ನು ಕೈಬಿಡಲಾಗಿದೆ.
ಪಕ್ಷವು ಈ ಕೂಡಲೇ ಬೆಂಗಳೂರು ಜಿಲ್ಲಾ ಆರೋಗ್ಯಾಧಿಕಾರಿಗಳ ವ್ಯಾಪಕ ಭ್ರಷ್ಟಾಚಾರಗಳಿಂದಾಗಿ ಬೆಂಗಳೂರು ಜನತೆ ಇಂದು ವ್ಯಾಪಕವಾಗಿ ಅನಾರೋಗ್ಯದಿಂದ ಸಾವು ನೋವುಗಳು ಸಂಭವಿಸುವ ಸಾಧ್ಯತೆ ಇರುವುದರಿಂದ ಈ ಕೂಡಲೇ ವಜಾಗೊಳಿಸಬೇಕೆಂದು ಸರ್ಕಾರವನ್ನು ಒತ್ತಾಯಿಸಿತು.
ಪ್ರತಿಭಟನೆಯಲ್ಲಿ ಬೆಂಗಳೂರು ನಗರ ಅಧ್ಯಕ್ಷ ಮೋಹನ್ ದಾಸರಿ, ಮಾಧ್ಯಮ ಸಂಚಾಲಕ ಜಗದೀಶ್ ವಿ ಸದಂ, ಚನ್ನಪ್ಪಗೌಡ ನಲ್ಲೂರು, ಸುಹಾಸಿನಿ ಪಣಿರಾಜ್, ಜಗದೀಶ್ ಬಾಬು,ಮಿಷೆಲ್ ನರೋನಾ ಸೇರಿದಂತೆ ನೂರಾರು ಸ್ಥಳೀಯ ಕಾರ್ಯಕರ್ತರು ಭಾಗವಹಿಸಿದ್ದರು.