Home ಟಾಪ್ ಸುದ್ದಿಗಳು ಪಂಜಾಬ್ | ಎಎಪಿ ಪಕ್ಷದ ಕೌನ್ಸಿಲರ್’ನನ್ನು ಗುಂಡಿಕ್ಕಿ ಹತ್ಯೆ

ಪಂಜಾಬ್ | ಎಎಪಿ ಪಕ್ಷದ ಕೌನ್ಸಿಲರ್’ನನ್ನು ಗುಂಡಿಕ್ಕಿ ಹತ್ಯೆ

ಚಂಡೀಗಢ: ಆಮ್ ಆದ್ಮಿ ಪಕ್ಷದ (ಎಎಪಿ) ಕೌನ್ಸಿಲರ್ ಮುಹಮ್ಮದ್ ಅಕ್ಬರ್ ಎಂಬಾತನನ್ನು ಪಂಜಾಬ್’ನ ಮಲೆರ್ಕೋಟ್ಲಾದಲ್ಲಿ ದುಷ್ಕರ್ಮಿಗಳ ತಂಡವೊಂದು ಗುಂಡಿಕ್ಕಿ ಹತ್ಯೆ ಮಾಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸ್ಥಳೀಯ ಕೌನ್ಸಿಲರ್ ಅಕ್ಬರ್ ಅವರು ಜಿಮ್’ನಲ್ಲಿದ್ದಾಗ ದುಷ್ಕರ್ಮಿಗಳು ಹತ್ತಿರದಿಂದ ಗುಂಡಿನ ದಾಳಿ ನಡೆಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಜಿಮ್’ನೊಳಗೆ ಬಂದ ವ್ಯಕ್ತಿಯೊಬ್ಬ ಕೌನ್ಸಿಲರ್ ಅಕ್ಬರ್ ಮೇಲೆ ಯದ್ವಾತದ್ವಾ ಗುಂಡು ಹಾರಿಸಿದ್ದಾನೆ. ಇದರಿಂದ ಅಕ್ಬರ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಆ ಬಳಿಕ ದುಷ್ಕರ್ಮಿಅಲ್ಲಿಂದ ಪರಾರಿಯಾಗಿದ್ದಾನೆ ಎಂದು ಮಲೆರ್ಕೋಟ್ಲಾ ಹಿರಿಯ ಪೊಲೀಸ್ ಅಧಿಕಾರಿ ಅನ್ವಿತ್ ಕೌರ್ ಸಿಧು ಮಾಧ್ಯಮಕ್ಕೆ ತಿಳಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಲಾಗಿದ್ದು, ಆರೋಪಿಗಳ ಬಂಧನಕ್ಕೆ ಸೂಕ್ತ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದರು.

Join Whatsapp
Exit mobile version