Home ಟಾಪ್ ಸುದ್ದಿಗಳು ವಕ್ಫ್ ಮಂಡಳಿ ಅಕ್ರಮ ಆರೋಪ: ಎಎಪಿ ಶಾಸಕ ಅಮಾನತುಲ್ಲಾಗೆ ಜಾಮೀನು

ವಕ್ಫ್ ಮಂಡಳಿ ಅಕ್ರಮ ಆರೋಪ: ಎಎಪಿ ಶಾಸಕ ಅಮಾನತುಲ್ಲಾಗೆ ಜಾಮೀನು

ನವದೆಹಲಿ: ದೆಹಲಿಯ ವಕ್ಫ್ ಮಂಡಳಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಕುರಿತು ಜಾರಿ ನಿರ್ದೇಶನಾಲಯ (ಇ.ಡಿ) ದಾಖಲಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಎಎಪಿ ಅಮಾನತುಲ್ಲಾ ಖಾನ್ ಅವರಿಗೆ ದೆಹಲಿಯ ರೋಸ್ ಅವೆನ್ಯೂ ನ್ಯಾಯಾಲಯ ಶನಿವಾರ ಜಾಮೀನು ಮಂಜೂರು ಮಾಡಿದೆ.

ನ್ಯಾಯಾಲಯವು 15 ಸಾವಿರದ ವೈಯಕ್ತಿಕ ಬಾಂಡ್ ಮತ್ತು ಶ್ಯೂರಿಟಿ ಆಧಾರದ ಮೇಲೆ ಜಾಮೀನು ನೀಡಿದೆ.


ದೆಹಲಿಯ ವಕ್ಫ್ ಮಂಡಳಿಗೆ ನಿಯಮಬಾಹಿರವಾಗಿ ಸಿಬ್ಬಂದಿ ನೇಮಕ ಮತ್ತು ಅದರ ಆಸ್ತಿಗಳನ್ನು ಗುತ್ತಿಗೆಗೆ ನೀಡಿದ ಹಣ ಅಕ್ರಮಗಳಿಗೆ ಸಂಬಂಧಿಸಿದಂತೆ ತನಿಖಾ ಸಂಸ್ಥೆಯ ಮುಂದೆ ಅಮಾನತುಲ್ಲಾ ಖಾನ್ ಹಾಜರಾಗುತ್ತಿಲ್ಲ ಎಂದು ಇ.ಡಿ ಇತ್ತೀಚೆಗೆ ದೂರು ದಾಖಲಿಸಿತ್ತು.

Join Whatsapp
Exit mobile version