Home ಟಾಪ್ ಸುದ್ದಿಗಳು ವಿಶ್ವದ ಅತಿ ದೊಡ್ಡ, ಅತ್ಯಂತ್ಯ ಋಣಾತ್ಮಕ ಪಕ್ಷವನ್ನು ಸೋಲಿಸಿದ ಎಎಪಿ: ಮನೀಶ್ ಸಿಸೋಡಿಯಾ

ವಿಶ್ವದ ಅತಿ ದೊಡ್ಡ, ಅತ್ಯಂತ್ಯ ಋಣಾತ್ಮಕ ಪಕ್ಷವನ್ನು ಸೋಲಿಸಿದ ಎಎಪಿ: ಮನೀಶ್ ಸಿಸೋಡಿಯಾ

ನವದೆಹಲಿ: ದೆಹಲಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ (ಎಎಪಿ) ಗೆದ್ದಿರುವುದಕ್ಕೆ ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ  ಧನ್ಯವಾದ ಅರ್ಪಿಸಿದ್ದು, ಇದು ಗೆಲುವು ಮಾತ್ರವಲ್ಲ, ನಮಗೆ ಬಂದ ದೊಡ್ಡ ಜವಾಬ್ದಾರಿ ಎಂದು ಹೇಳಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ‘ದೆಹಲಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದ ಮೇಲೆ ನಂಬಿಕೆ ಇರಿಸಿದ ದೆಹಲಿಯ ಜನತೆಗೆ ಧನ್ಯವಾದಗಳು. ವಿಶ್ವದ ಅತಿ ದೊಡ್ಡ ಹಾಗೂ ಅತ್ಯಂತ್ಯ ನಕಾರಾತ್ಮಕವಾದ ಪಕ್ಷವನ್ನು ಮಣಿಸಿ, ಕೇಜ್ರಿವಾಲ್ ಅವರನ್ನು ಜನರು ಗೆಲ್ಲಿಸಿದ್ದಾರೆ. ಇದು ನಮಗೆ ಕೇವಲ ಜಯ ಮಾತ್ರವಲ್ಲ. ನಮಗೆ ಬಂದ ದೊಡ್ಡ ಜವಾಬ್ದಾರಿ ಎಂದು ತಿಳಿಸಿದರು.

ಇದೇ ಮೊದಲ ಬಾರಿಗೆ ದೆಹಲಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ 15 ವರ್ಷಗಳ ಬಿಜೆಪಿ ಆಡಳಿತ ಅಂತ್ಯವಾಗಿ ಆಮ್ ಆದ್ಮಿ ಪಕ್ಷವು ಅಧಿಕಾರ ಹಿಡಿದಿದೆ.

Join Whatsapp
Exit mobile version