Home ಟಾಪ್ ಸುದ್ದಿಗಳು ಆಧಾರ್ ಕಾರ್ಡ್‌ ಅರ್ಜಿದಾರರು NRC ಅರ್ಜಿ ರಶೀದಿ ಸಂಖ್ಯೆ ಸಲ್ಲಿಸಬೇಕು: ಅಸ್ಸಾಂ ಸಿಎಂ

ಆಧಾರ್ ಕಾರ್ಡ್‌ ಅರ್ಜಿದಾರರು NRC ಅರ್ಜಿ ರಶೀದಿ ಸಂಖ್ಯೆ ಸಲ್ಲಿಸಬೇಕು: ಅಸ್ಸಾಂ ಸಿಎಂ

ಗುವಾಹಟಿ: ರಾಜ್ಯದಲ್ಲಿ ಆಧಾರ್ ಕಾರ್ಡ್‌ಗಾಗಿ ಹೊಸ ಅರ್ಜಿದಾರರು ತಮ್ಮ ರಾಷ್ಟ್ರೀಯ ನಾಗರಿಕರ ನೋಂದಣಿ (NRC) ಅರ್ಜಿ ರಶೀದಿ ಸಂಖ್ಯೆಯನ್ನು ಸಲ್ಲಿಸಬೇಕು ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ.

ಆಧಾರ್ ಕಾರ್ಡ್‌ಗಾಗಿ ಅರ್ಜಿಗಳು ಜನಸಂಖ್ಯೆಗಿಂತ ಹೆಚ್ಚಿದ್ದು, ಅನುಮಾನಾಸ್ಪದ ನಾಗರಿಕರಿದ್ದಾರೆ ಎಂಬುದನ್ನು ಇದು ಸೂಚಿಸುತ್ತದೆ ಎಂದ ಅವರು, ಹೊಸ ಅರ್ಜಿದಾರರು ತಮ್ಮ ಎನ್‌ಆರ್‌ಸಿ ಅರ್ಜಿ ರಶೀದಿ ಸಂಖ್ಯೆಯನ್ನು ಸಲ್ಲಿಸಬೇಕು ಎಂದು ನಾವು ನಿರ್ಧರಿಸಿದ್ದೇವೆ ಎಂದು ಹೇಳಿದ್ದಾಗಿ ಪಿಟಿಐ ಉಲ್ಲೇಖಿಸಿದೆ.

ಅಕ್ರಮ ವಿದೇಶಿಗರ ಒಳಹರಿವನ್ನು ತಡೆಯಲು ಈ ಕ್ರಮ ಅಗತ್ಯ. ಆಧಾರ್ ಕಾರ್ಡ್‌ಗಳನ್ನು ನೀಡುವಲ್ಲಿ ರಾಜ್ಯ ಸರ್ಕಾರವು ಅತ್ಯಂತ ಕಟ್ಟುನಿಟ್ಟಾಗಿ ಇರುತ್ತದೆ. ಅಸ್ಸಾಂನಲ್ಲಿ ಆಧಾರ್ ಪಡೆಯುವುದು ಸುಲಭವಲ್ಲ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.

ಎನ್‌ಆರ್‌ಸಿ ಪ್ರಕ್ರಿಯೆಯಲ್ಲಿ ಬಯೋಮೆಟ್ರಿಕ್ಸ್ ಲಾಕ್ ಆಗಿರುವ 9.55 ಲಕ್ಷ ಜನರಿಗೆ ಎನ್‌ಆರ್‌ಸಿ ಅರ್ಜಿ ರಶೀದಿ ಸಂಖ್ಯೆಯನ್ನು ಸಲ್ಲಿಸುವುದು ಅನ್ವಯಿಸುವುದಿಲ್ಲ ಮತ್ತು ಅವರು ತಮ್ಮ ಕಾರ್ಡ್‌ಗಳನ್ನು ಪಡೆಯುತ್ತಾರೆ ಎಂದೂ ಶರ್ಮಾ ತಿಳಿಸಿದ್ದಾರೆ.

Join Whatsapp
Exit mobile version