Home ಟಾಪ್ ಸುದ್ದಿಗಳು ಮಗನೊಂದಿಗೆ ಚಕ್ಕಂದ ಆಡಿ ತಂದೆಯ ಜೊತೆ ಪರಾರಿಯಾದ ಯುವತಿ

ಮಗನೊಂದಿಗೆ ಚಕ್ಕಂದ ಆಡಿ ತಂದೆಯ ಜೊತೆ ಪರಾರಿಯಾದ ಯುವತಿ

ಲಕ್ನೋ: ಯುವತಿಯೊಬ್ಬಳು ತನ್ನ ಪ್ರಿಯತಮನ ತಂದೆಯೊಂದಿಗೆ ಪರಾರಿಯಾಗಿರುವ ವಿಚಿತ್ರ ಘಟನೆ ಉತ್ತರಪ್ರದೇಶದ ಕಾನ್ಪುರದ ಚಕೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. 13 ತಿಂಗಳ ಸಂಸಾರ ನಡೆಸಿದ ಈ ಅಪೂರ್ವ ಜೋಡಿಯನ್ನು ಪೊಲೀಸರು ದೆಹಲಿಯಲ್ಲಿ ಪತ್ತೆಹಚ್ಚಿದ್ದಾರೆ.


ವೃತ್ತಿಪರ ಮೇಸ್ತ್ರಿ ಆಗಿದ್ದ ಉತ್ತರ ಪ್ರದೇಶದ ಔರೈಯಾ ಜಿಲ್ಲೆಯ ಕಂಜುಸಿ ಗ್ರಾಮದ ನಿವಾಸಿ ಕಮಲೇಶ್ ಕುಮಾರ್ ಯುವತಿಯ ಜೊತೆ ಸಂಸಾರ ನಡೆಸಿದ ವ್ಯಕ್ತಿ. ಯುವತಿಯೊಂದಿಗೆ ತನ್ನ ಮಗ ಅಮಿತ್ ಗೆ ಪ್ರೇಮಾಂಕುರವಾದ ವಿಚಾರ ತಿಳಿದ ಕಮಲೇಶ್ ಕುಮಾರ್, ಮಗನನ್ನು ಗದರಿಸಿ ಮನೆಗೆ ಬೀಗ ಹಾಕಿ ಬಾಲಕಿಯನ್ನು ಭೇಟಿಯಾಗದಂತೆ ನಿರ್ಬಂಧ ಹೇರಿದ್ದ. ಆದರೆ ಅಮಿತ್ ಯುವತಿಯೊಂದಿಗೆ ಮೊಬೈಲ್ನಲ್ಲಿ ಮಾತನಾಡುವುದನ್ನು ಮುಂದುವರಿಸಿದ್ದರಿಂದ ಇಬ್ಬರ ಮದುವೆಗೆ ಕಮಲೇಶ್ ಒಪ್ಪಿಗೆ ಸೂಚಿಸಿದ್ದ ಎನ್ನಲಾಗಿದೆ. ಆದರೆ 2022 ಮಾರ್ಚ್ ನಲ್ಲಿ ಯುವತಿ ಕಾಣೆಯಾಗಿದ್ದಳು.


ಇನ್ನೊಂದು ಕಡೆ ಕಮಲೇಶ್ ಕೂಡ ಕಾಣೆಯಾಗಿದ್ದು, ಎರಡೂ ಕುಟುಂಬಸ್ಥರು ಪ್ರತ್ಯೇಕ ದೂರು ದಾಖಲಿಸಿದ್ದರು. ಕಳೆದ ಒಂದು ವರ್ಷದಿಂದ ಹುಡುಕಾಟ ನಡೆಸಿದ ಪೊಲೀಸರು, ದೆಹಲಿಯಲ್ಲಿ ಜೊತೆಯಾಗಿ ವಾಸವಿದ್ದ ಜೋಡಿಯನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಯುವತಿಯನ್ನು ರಕ್ಷಿಸಿರುವ ಪೊಲೀಸರು ಆಕೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದು, ಕಮಲೇಶನ್ನ್ನು ವಶಕ್ಕೆ ಪಡೆದಿದ್ದಾರೆ.

Join Whatsapp
Exit mobile version