ಯುವಕನನ್ನು ಕೊಲೆಗೈದು ಕಾಲುವೆಗೆ ಎಸೆದ ಪ್ರಕರಣ; ಐವರ ಬಂಧನ

Prasthutha|


ಬೆಂಗಳೂರು:
ಬೆಲ್ಟ್ ನಿಂದ ಕುತ್ತಿಗೆ ಬಿಗಿದು ಉಸಿರುಗಟ್ಟಿಸಿ ಯುವಕನನ್ನು ಕೊಲೆಗೈದು ರಾಜಕಾಲುವೆಗೆ ಎಸೆದ ಘಟನೆ ಹೆಣ್ಣೂರು ಠಾಣೆ ವ್ಯಾಪ್ತಿಯಲ್ಲಿ‌ ನಡೆದಿದೆ.

- Advertisement -


ಧನ್‌ಸಿಂಗ್‌ ದಾಮಿ(23) ಎಂಬಾತ ಮೃತ ದುರ್ದೈವಿ. ಪ್ರಕರಣಕ್ಕೆ ಸಂಬಂಧಿಸಿ ಬಾಬುಸಾಬ್‌ ಪಾಳ್ಯದ ದಿನೇಶ್‌ ಸಿಂಗ್‌ ದಾಮಿ(19), ಶೇರ್‌ಸಿಂಗ್‌ ದಾಮಿ(20), ದೀಪಕ್‌(19), ನರೇಂದ್ರ(20) ಸಹಿತ ಐವರನ್ನು ಪೊಲೀಸರು‌ ಬಂಧಿಸಿದ್ದಾರೆ. ಕೊಲೆಯಾದವ ಮತ್ತು ಬಂಧಿತರು ನೇಪಾಳದ ಮೂಲದವರಾಗಿದ್ದು, ಬಂಧಿತರಲ್ಲಿ ಓರ್ವ ಅಪ್ರಾಪ್ತ ವಯಸ್ಕನಾಗಿದ್ದಾನೆ.


ಭಾನುವಾರ ಬಾಬುಸಾಬ್‌ ಪಾಳ್ಯದ ರಾಜಕಾಲುವೆಯಲ್ಲಿ ಅಪರಿಚಿತ ಮೃತದೇಹ ಪತ್ತೆಯಾಗಿತ್ತು. ಮೃತದೇಹ ಹೊರತೆಗೆದು ಪರಿಶೀಲಿಸಿದಾಗ ಹಲ್ಲೆ ಮಾಡಿ ಆತನನನ್ನು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿತ್ತು.

- Advertisement -


ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದಾಗ ಧನ್‌ಸಿಂಗ್‌ ದಾಮಿ ಎಂಬಾತನ‌ ಕೊಲೆ ಬಹಿರಂಗವಾಗಿತ್ತು. ಧನಸಿಂಗ್ ಪಿಜಿಯೊಂದರಲ್ಲಿ ಹೌಸ್‌ ಕೀಪಿಂಗ್‌ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.ಅಲ್ಲಿನ‌ ಕೆಲವರನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಅಸಲಿಯತ್ತು ಬಹಿರಂಗವಾಗಿದೆ.

Join Whatsapp
Exit mobile version