ಉರಿ ಬಿಸಿಲು: ಕಾರಿನ ಬಾನೆಟ್ ಮೇಲೆ ಚಪಾತಿ ಬೇಯಿಸಿದ ಮಹಿಳೆ !

Prasthutha|

ಒಡಿಶಾ: ಒಡಿಶಾದ ಸೋನೆಪುರ್‌ ನಲ್ಲಿ ಮಹಿಳೆಯೊಬ್ಬರು ಕಾರ್ ಬಾನೆಟ್‌ ಮೇಲೆ ಚಪಾತಿ ಬೇಯಿಸುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.

- Advertisement -

ಭಾರತವು ಸದ್ಯ ತೀವ್ರ ಶಾಖದ ಅಲೆಯಲ್ಲಿ ತತ್ತರಿಸುತ್ತಿದ್ದು, ದೇಶದ ಹಲವು ಭಾಗಗಳಲ್ಲಿ 40 ಡಿಗ್ರಿ ಸೆಲ್ಸಿಯಸ್‌ ಗಿಂತ ಹೆಚ್ಚು ತಾಪಮಾನ ದಾಖಲಾಗಿದೆ. ಒಡಿಶಾ ಕೂಡ ಉರಿ ಬಿಸಿಲಿನಿಂದ ತತ್ತರಿಸಿದೆ. ಇದೇ ವಿಷಯವನ್ನು ಹೈಲೈಟ್ ಮಾಡಲು ಮಹಿಳೆಯೊಬ್ಬರು ಒಡಿಶಾದಲ್ಲಿ 40 ಡಿಗ್ರಿ ತಾಪಮಾನದಲ್ಲಿ ಕಾರಿನ ಬಾನೆಟ್ ಮೇಲೆ ಚಪಾತಿ ಮಾಡುತ್ತಿರುವುದನ್ನು ತೋರಿಸುವ ವೀಡಿಯೋ ವೈರಲ್ ಆಗಿದೆ.

ಟ್ವಿಟ್ಟರ್ ಬಳಕೆದಾರ ನಿಲಮಾಧಬ್ ಪಾಂಡಾ ಅವರು ಈ ವೀಡಿಯೊವನ್ನು ಹಂಚಿಕೊಂಡಿದ್ದು, ಇದು ನಮ್ಮೂರಾದ ಸೋನೆಪುರದ ದೃಶ್ಯಗಳು. ಇಲ್ಲಿ ಹೀಟ್ ವೇವ್ ಜಾಸ್ತಿಯಾಗಿದ್ದು, ವಾತಾವರಣ ತುಂಬಾ ಬಿಸಿಯಾಗಿರುತ್ತದೆ. ಇಲ್ಲಿನ ಬಿಸಿಲಿಗೆ ಕಾರ್ ಬಾನೆಟ್‌ ನಲ್ಲಿ ರೊಟ್ಟಿ ಮಾಡಬಹುದು ಎಂದು  ಬರೆದಿದ್ದಾರೆ.

Join Whatsapp
Exit mobile version