Home ಟಾಪ್ ಸುದ್ದಿಗಳು ಆಸ್ಪತ್ರೆಯಲ್ಲಿ ಐಸಿಯುನಲ್ಲಿದ್ದ ಮಹಿಳೆಯ ಮೇಲೆ ನರ್ಸಿಂಗ್ ಸಹಾಯಕನಿಂದ ಅತ್ಯಾಚಾರ

ಆಸ್ಪತ್ರೆಯಲ್ಲಿ ಐಸಿಯುನಲ್ಲಿದ್ದ ಮಹಿಳೆಯ ಮೇಲೆ ನರ್ಸಿಂಗ್ ಸಹಾಯಕನಿಂದ ಅತ್ಯಾಚಾರ

ಜಪುರ: ಆಸ್ಪತ್ರೆಯೊಂದರ ಐಸಿಯುನಲ್ಲಿ ಚಿಕಿತ್ಸೆಯಲ್ಲಿದ್ದ 24 ಹರೆಯದ ಮಹಿಳೆಯ ಮೇಲೆ ನರ್ಸಿಂಗ್ ಸಹಾಯಕನೋರ್ವ ಅತ್ಯಾಚಾರವೆಸಗಿರುವ ಘಟನೆ ರಾಜಸ್ಥಾನದ ಆಲ್ವಾರ್ ಜಿಲ್ಲೆಯಲ್ಲಿ ನಡೆದಿದೆ. ಶ್ವಾಸಕೋಶ ಸೋಂಕಿನಿಂದ ಬಳಲುತ್ತಿರುವ ಮತ್ತು ಅತ್ಯಾಚಾರದಿಂದ ತೀವ್ರ ಅಸ್ವಸ್ಥೆಯಾಗಿರುವ ಮಹಿಳೆಯ ದೂರಿನಂತೆ ಚಿರಾಗ್ ಯಾದವ್ ಎಂಬಾತನನ್ನು ಪೋಲಿಸರು ಬಂಧಿಸಿದ್ದಾರೆ.

ನಸುಕಿನ ನಾಲ್ಕು ಗಂಟೆಯ ಸುಮಾರಿಗೆ ಈ ಘಟನೆ ನಡೆದಿದೆ. ತಾನು ಬೊಬ್ಬೆ ಹೊಡೆದಾಗ ಆರೋಪಿ ತನಗೆ ಚುಚ್ಚುಮದ್ದೊಂದನ್ನು ನೀಡಿದ್ದು, ಬಳಿಕ ತಾನು ಪ್ರಜ್ಞೆಯನ್ನು ಕಳೆದುಕೊಂಡಿದ್ದೆ. ತನ್ನ ಪತಿ ತನ್ನ ಮೊಬೈಲ್ ಫೋನ್ ಗೆ ಕರೆ ಮಾಡಿದಾಗ ತನಗೆ ಪ್ರಜ್ಞೆ ಮರುಕಳಿಸಿತ್ತು. ಬಳಿಕ ತಾನು ಅನುಭವಿಸಿದ್ದ ಸಂಕಷ್ಟದ ಬಗ್ಗೆ ಕುಟುಂಬಕ್ಕೆ ಮಾಹಿತಿ ನೀಡಿದ್ದೆ ಎಂದು ಸಂತ್ರಸ್ತ ಮಹಿಳೆ ತಿಳಿಸಿದ್ದಾಳೆ.

ಚಿರಾಗ್ ಯಾದವ್ ಮಹಿಳೆಯ ಹಾಸಿಗೆಯತ್ತ ತೆರಳಿದ್ದು ಮತ್ತು ಅದನ್ನು ಪರದೆಗಳಿಂದ ಮುಚ್ಚಿದ್ದನ್ನು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಪೊಲೀಸರಿಗೆ ಮಹತ್ವದ ಸಾಕ್ಷಿಯಾಗಿದೆ.

Join Whatsapp
Exit mobile version