ಬೆಳಗಾವಿ: ಬೆಳಗಾವಿಯಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ವ್ಯಕ್ತಿಯೊಬ್ಬರ ಮೇಲೆ ರಸ್ತೆಯ ಮೇಲೆ ಕಾಲಿನಿಂದ ಒದೆಯುತ್ತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಪೊಲೀಸ್ ಅಧಿಕಾರಿಯ ದೌರ್ಜನ್ಯದ ವಿರುದ್ಧ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದರು. ವಾಸವದಲ್ಲಿ ಇದರ ಅಸಲಿಯತ್ತು ಬೇರೆಯೇ ಆಗಿತ್ತು.
ಇಲ್ಲಿದೆ ವಾಸ್ತವಾಂಶ
ಬೆಳಗಾವಿಯ ರಾಣಿಚೆನ್ನಮ್ಮ ಸರ್ಕಲ್’ನಲ್ಲಿ ನಡೆದ ಹೊಯ್ಸಳ ಫಿಲಂನ ಚಿತ್ರೀಕರಣದಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ವ್ಯಕ್ತಿಯೊಬ್ಬನ ಮೇಲೆ ಹಲ್ಲೆ ನಡೆಸುತ್ತಿರುವ ದೃಶ್ಯವನ್ನು ಚಿತ್ರೀಕರಿಸಲಾಗಿತ್ತು. ಇದರ ವೀಡಿಯೋ ತುಣುಕನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಇದನ್ನು ತಪ್ಪಾಗಿ ಅರ್ಥೈಸಿದ ನೆಟ್ಟಿಗರು ಪೊಲೀಸ್ ಅಧಿಕಾರಿಯ ದಬ್ಬಾಳಿಕೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.
ಈ ಕುರಿತು ಪತ್ರಿಕಾ ಹೇಳಿಕೆಯ ಸ್ಪಷ್ಟನೆ ನೀಡಿದ ಬೆಳಗಾವಿ ನಗರ ಪೊಲೀಸರು, ಈ ವಿಡಿಯೋ ಚಲನಚಿತ್ರದ ದೃಶ್ಯ, ಆದ್ದರಿಂದ ಯಾರು ಕೂಡ ಇದನ್ನು ತಪ್ಪಾಗಿ ಅರ್ಥೈಸಿಕೊಳ್ಳಬಾರದು ಎಂದು ಮನವಿ ಮಾಡಿದ್ದಾರೆ.