Home ಟಾಪ್ ಸುದ್ದಿಗಳು ಮ್ಯಾನ್‌ಹೋಲ್‌ಗೆ ಬಿದ್ದು ಎರಡು ವರ್ಷದ ಬಾಲಕ ಮೃತ

ಮ್ಯಾನ್‌ಹೋಲ್‌ಗೆ ಬಿದ್ದು ಎರಡು ವರ್ಷದ ಬಾಲಕ ಮೃತ

ಗುರುಗ್ರಾಮ್: ಎರಡು ವರ್ಷದ ಬಾಲಕ ಮ್ಯಾನ್‌ಹೋಲ್‌ಗೆ ಬಿದ್ದು ಮೃತಪಟ್ಟಿರುವ ದಾರುಣ ಘಟನೆ ಗುರುಗ್ರಾಮದ ಸೆಕ್ಟರ್ 37ರಲ್ಲಿ ನಡೆದಿದೆ.

ಸಿಹಿ ಗ್ರಾಮದಲ್ಲಿರುವ ತನ್ನ ತಂದೆ ಭಗತ್ ಕುಮಾರ್ ಟೀ ಅಂಗಡಿಯ ಮುಂದೆ ಬಾಲಕ ಪ್ರದೀಪ್ ಕುಮಾರ್ ಆಟವಾಡುವಾಗ ಈ ಘಟನೆ ನಡೆದಿದೆ ಎಂದು ಠಾಣಾಧಿಕಾರಿ ಸತ್ಯವಾನ್ ಮಾಹಿತಿ ನೀಡಿದ್ದಾರೆ.

ನನ್ನ ಪುತ್ರ ಟೀ ಅಂಗಡಿಯೆದುರು ಆಟವಾಡುತ್ತಿದ್ದಾಗ ಕಾಣೆಯಾಗಿದ್ದಾನೆ. ನಾವು ಆತನನ್ನು ಹುಡುಕಾಡಲು ಪ್ರಾರಂಭಿಸಿದಾಗ, ಆತ ಒಳಚರಂಡಿಯಲ್ಲಿ ಬಿದ್ದಿರುವುದು ಕಂಡು ಬಂತು ಎಂದು ಭಗತ್ ಕುಮಾರ್ ತಮ್ಮ ದೂರಿನಲ್ಲಿ ಮಾಹಿತಿ ನೀಡಿದ್ದಾರೆ.

ಈ ಘಟನೆಗೆ ಪ್ರಾಧಿಕಾರಗಳು ಮ್ಯಾನ್‌ಹೋಲ್ ಅನ್ನು ತೆರೆದ ಸ್ಥಿತಿಯಲ್ಲೇ ಬಿಟ್ಟು ಹೋಗಿರುವುದು ಕಾರಣ ಎಂದು ಅವರು ದೂರಿದ್ದಾರೆ.

ಭಗತ್ ಕುಮಾರ್ ದೂರನ್ನು ಆಧರಿಸಿ ಎಫ್‌ ಐ ಆರ್ ದಾಖಲಿಸಿಕೊಂಡಿರುವ ಪೊಲೀಸರು, ತನಿಖೆ ಕೈಗೊಂಡಿದ್ದಾರೆ‌.

Join Whatsapp
Exit mobile version