Home ಟಾಪ್ ಸುದ್ದಿಗಳು ಮೊದಲ ಬಾರಿಗೆ ನಗರಸಭಾ ಕಾರ್ಪೋರೇಟರ್ ಆದ ಮಂಗಳಮುಖಿ

ಮೊದಲ ಬಾರಿಗೆ ನಗರಸಭಾ ಕಾರ್ಪೋರೇಟರ್ ಆದ ಮಂಗಳಮುಖಿ

ಕೊಲ್ಹಾಪುರ (ಮಹಾರಾಷ್ಟ್ರ): ಮಂಗಳಮುಖಿಯೊಬ್ಬರು ಕೊಲ್ಹಾಪುರ ಜಿಲ್ಲೆಯ ಹುಪಾರಿ ಮುನ್ಸಿಪಾಲ್ ಕಾರ್ಪೋರೇಟರ್ ಆಗಿ ನೇಮಕ ಆಗಿದ್ದಾರೆ.


ತಾಟೋಬಾ ಬಾಬುರಾವ್ ಹಂದೆ ಕಾರ್ಪೋರೇಟರ್ ಆದ ಮಂಗಳಮುಖಿ.


ಇಂದು ನಡೆದ ವಿಶೇಷ ಸಾಮಾನ್ಯ ಸಭೆಯಲ್ಲಿ ಆಡಳಿತಾರೂಢ ತಾರಾರಾಣಿ ಅಘಾಡಿ ಹಂದೆ ಅವರಿಗೆ ಈ ಗೌರವ ನೀಡಿದ್ದಾರೆ. ಬಹುಮತವಿದ್ದರೆ ತೃತೀಯ ಲಿಂಗಿ ಈ ರಾಜ್ಯದ ಮುಖ್ಯಮಂತ್ರಿಯೂ ಆಗಬಹುದು ಎಂದು ಕೆಲ ದಿನಗಳ ಹಿಂದೆ ವಿಧಾನಸಭೆಯ ಪ್ರತಿಪಕ್ಷದ ನಾಯಕ ಅಜಿತ್ ಪವಾರ್ ಹೇಳಿದ್ದರು. ಆದರೆ ಇದುವರೆಗೂ ರಾಜಕೀಯದಲ್ಲಿ ಇಂತಹ ಚಿತ್ರಣ ಕಂಡು ಬಂದಿಲ್ಲ. ಆದರೆ, ಇಂದು ಹುಪಾರಿ ನಗರಸಭೆ ತೃತೀಯ ಲಿಂಗಿಯೊಬ್ಬರನ್ನು ಕಾರ್ಪೋರೇಟರ್ ಆಗಿ ಆಯ್ಕೆ ಮಾಡಿದ್ದು ಆಶಾದಾಯಕವಾಗಿದೆ.

Join Whatsapp
Exit mobile version