Home ಟಾಪ್ ಸುದ್ದಿಗಳು ಬೈಕ್ ಸ್ಕಿಡ್ ಆಗಿ ರಸ್ತೆಗೆಸೆಯಲ್ಪಟ್ಟ ಯುವಕನ ಮೈಮೇಲೆ ಹರಿದ ಟ್ಯ್ರಾಕ್ಟರ್; ಸ್ಥಳದಲ್ಲೇ ಸಾವು

ಬೈಕ್ ಸ್ಕಿಡ್ ಆಗಿ ರಸ್ತೆಗೆಸೆಯಲ್ಪಟ್ಟ ಯುವಕನ ಮೈಮೇಲೆ ಹರಿದ ಟ್ಯ್ರಾಕ್ಟರ್; ಸ್ಥಳದಲ್ಲೇ ಸಾವು

ಮೂಡಿಗೆರೆ: ಬೈಕ್ ಸ್ಕಿಡ್ ಆಗಿ ಮಗುಚಿ ಬಿದ್ದ ವೇಳೆ ಟ್ರ್ಯಾಕ್ಟರ್ ಮೈಮೇಲೆ ಹರಿದು ಬೈಕ್ ಸವಾರ ದಾರುಣವಾಗಿ ಮೃತಪಟ್ಟ ಘಟನೆ ಆಲ್ಲೂರು ಸಮೀಪ ವಸ್ತಾರೆ ಎಂಬಲ್ಲಿ ನಡೆದಿದೆ.


ಚಾರ್ಮಾಡಿ ಬೀಟಿಗೆ ನಿವಾಸಿ ಸುಲೈಮಾನ್ (35) ಎಂಬವರು ಮೃತ ವ್ಯಕ್ತಿ. ಘಟನೆಯಲ್ಲಿ ಸಹಸವಾರ ಅಶ್ರಫ್ ಅವರಿಗೆ ಗಂಭೀರ ಗಾಯಗಳಾಗಿದ್ದು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.


ಮೃತ ಸುಲೈಮಾನ್ ಮೇಸ್ತ್ರಿ ಕೆಲಸ ಮಾಡಿಕೊಂಡಿದ್ದು, ಚಿಕ್ಕಮಗಳೂರಿನ ಸಹೋದರಿಯ ಮನೆಗೆ ಕೆಲಸದ ನಿಮಿತ್ತ ಪ್ರಯಾಣಿಸುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ.

Join Whatsapp
Exit mobile version