ಸೌದಿ ಅರೇಬಿಯಾ: ಇಂಡಿಯನ್ ಸೋಶಿಯಲ್ ಫೋರಮ್ ಯಾಂಬೊ ಇದರ ವತಿಯಿಂದ ರೋಯಲ್ ಕಮಿಷನ್ ಯಾಂಬೊ ಆಸ್ಪತ್ರೆ ಸಹಭಾಗಿತ್ವದಲ್ಲಿ ಆಗಸ್ಟ್ 3ರಿಂದ 5ರವರೆಗೆ ರಕ್ತದಾನ ಶಿಬಿರವು ರೋಯಲ್ ಕಮಿಷನ್ ಆಸ್ಪತ್ರೆಯಲ್ಲಿ ನಡೆಯಿತು.
ಉದ್ಘಾಟನಾ ಕಾರ್ಯಕ್ರಮದಲ್ಲಿ ಇಂಡಿಯನ್ ಸೋಶಿಯಲ್ ಫೋರಮ್ ಯಾಂಬೊ ಇದರ ಅಧ್ಯಕ್ಷ ಸಯ್ಯದ್ ಶೌಕತ್ ಅಲಿ ಮಾತನಾಡಿ, ರಕ್ತದಾನ ಮಾಡುವ ಮೂಲಕ ಅಗತ್ಯವಿರುವವರಿಗೆ ಸೂಕ್ತ ಸಂದರ್ಭದಲ್ಲಿ ರಕ್ತ ಒದಗಿಸಿ ಒಂದು ಜೀವ ಉಳಿಸಿದ ಪುಣ್ಯ ಕಾರ್ಯ ಮಾಡಿದಂತಾಗುತ್ತದೆ ಎಂದರು.
ಈ ರಕ್ತದಾನ ಶಿಬಿರದಲ್ಲಿ 22 ರಕ್ತದಾನಿಗಳು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿದರು.
ಕಾರ್ಯದರ್ಶಿ ತೌಸೀಫ್ ನಿಟ್ಟೆ ಸೇರಿದಂತೆ ಸಂಘಟನೆಯ ಮುಖಂಡರು, ಕಾರ್ಯಕರ್ತರು, ಅನಿವಾಸಿಗಳು ಪಾಲ್ಗೊಂಡಿದ್ದರು.