ದೆಹಲಿ ಮೆಟ್ರೋದಲ್ಲಿ ಪರ್ಸ್ ಕದ್ದು ಸಿಕ್ಕಿಬಿದ್ದ ಕಳ್ಳ: ವ್ಯಕ್ತಿಯೋರ್ವನಿಂದ ತೀವ್ರ ಥಳಿತ | ವಿಡಿಯೋ ವೈರಲ್

Prasthutha|

ನವದೆಹಲಿ: ಮೆಟ್ರೋದಲ್ಲಿ ಪರ್ಸ್ ಕದಿಯುವಾಗಲೇ ಕಳ್ಳ ಸಿಕ್ಕಿಬಿದ್ದಿದ್ದು, ವ್ಯಕ್ತಿಯೋರ್ವ ಆತನಿಗೆ ತೀವ್ರವಾಗಿ ಥಳಿಸಿದ್ದಾನೆ. ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

- Advertisement -

ವೀಡಿಯೋದಲ್ಲಿ ಕಳ್ಳ ತನಗೆ ಥಳಿಸುತ್ತಿರುವ ವ್ಯಕ್ತಿಯ ಬಳಿ ಕೈಮುಗಿದು ಕ್ಷಮೆಯಾಚಿಸುತ್ತಿರುವುದನ್ನು ಕಾಣಬಹುದಾಗಿದೆ. ನಾನು ತಪ್ಪು ಮಾಡಿದ್ದೇನೆ, ನಾನು ನಿಮ್ಮ ಕಾಲಿಗೆ ಬಿದ್ದೆ ಆತ ಎಂದು ಹೇಳುತ್ತಾನೆ, ವ್ಯಕ್ತಿ ಕೋಪಗೊಂಡು ಥಳಿತ ಮುಂದುವರೆಸುತ್ತಾನೆ. ಇದಾದ ನಂತರ ಕಳ್ಳ ಅಂಕಲ್ ನಾನು ಸಾಯುತ್ತೇನೆ ಬಿಟ್ಟು ಬಿಡಿ ನಾನು ಸಾಯುತ್ತೇನೆ ಎಂದು ಬೇಡಿಕೊಳ್ಳುತ್ತಾನೆ. ಆದರೂ ಕಳ್ಳನಿಗೆ ಕಪಾಳಮೋಕ್ಷ‌ ಮುಂದುವರೆಯುತ್ತದೆ.

ಮೆಟ್ರೋದಲ್ಲಿ ನಿಂತ ಮತ್ತು ಕುಳಿತ ಇತರ ಪ್ರಯಾಣಿಕರು ಪ್ರೇಕ್ಷಕರಂತೆ ಎಲ್ಲವನ್ನೂ ನೋಡುತ್ತಿದ್ದರು ಅಥವಾ ಕಳ್ಳನಿಗೆ ಹೊಡೆಯುತ್ತಿರುವ ವೀಡಿಯೊವನ್ನು ಮಾಡುವುದರಲ್ಲಿ ನಿರತರಾಗಿದ್ದರು. ಈ ವೀಡಿಯೊವನ್ನು @gharkekalesh ಹೆಸರಿನ ID ಯೊಂದಿಗೆ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಟ್ವಿಟರ್‌ನಲ್ಲಿ ಹಂಚಿಕೊಳ್ಳಲಾಗಿದೆ. ಕೇವಲ 30 ಸೆಕೆಂಡ್ ಗಳ ಈ ವೀಡಿಯೋವನ್ನು ಇದುವರೆಗೆ 5 ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಿಸಲಾಗಿದ್ದು, ಸಾವಿರಾರು ಮಂದಿ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ.

- Advertisement -

ಕಳ್ಳನು ಕದ್ದಿದ್ದಾನೆ ಎಂದು ನಾನು ಒಪ್ಪುತ್ತೇನೆ, ಆದರೆ ಅವನು ಕ್ಷಮೆಯಾಚಿಸುತ್ತಿದ್ದಾನೆ. ಆಮೇಲೆ ಈ ರೀತಿ ಹೊಡೆದು ಏನು ಪ್ರಯೋಜನ ಎಂದು ಪೊಲೀಸರಿಗೆ ಒಪ್ಪಿಸಿ. ಆತನನ್ನು ಹೊಡೆಯುವ ಹಕ್ಕು ಯಾರಿಗೂ ಇಲ್ಲ’ ಎಂದು ಒಬ್ಬರು ಕಾಮೆಂಟ್​​ ಮಾಡಿದ್ದಾರೆ.

Join Whatsapp