ಬಂಟ್ವಾಳ: ಬಿಸಿ ರೋಡ್‌ನಲ್ಲಿರುವ ಸಬ್ ರಿಜಿಸ್ಟ್ರಾರ್ ಆಫೀಸ್ ಆವರಣದಲ್ಲಿ ಕಸಗಳ ರಾಶಿ ಕಾಣುತ್ತಿದ್ದು, ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸ್ವಚ್ಛ ಭಾರತ ಅಭಿಯಾನವು ಭಾರೀ ಪ್ರಚಾರ ಪಡೆಯುತ್ತಿದ್ದು, ಕೇಂದ್ರ ಸರಕಾರ ಈ ಅಭಿಯಾನದ ಪ್ರಚಾರಕ್ಕೆನೇ ಕೋಟ್ಯಂತರ ರೂ. ಖರ್ಚು ಮಾಡುತ್ತಿದೆ. ಹಾಗಿರುವಾಗ ಸರಕಾರಿ ಕಛೇರಿ ಆವರಣದಲ್ಲಿಯೇ ತಿಂಗಳು ಗಟ್ಟಲೆ ಕಸವನ್ನು ತೆಗೆಯದೆ ಹಾಗೆ ಅಲ್ಲೆಂದರಲ್ಲಿ ಮೂಲೆಯಲ್ಲಿ ರಾಶಿ ಹಾಕಿದ್ದನ್ನು ನೋಡಿದ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ವಚ್ಛತೆ ಬಗ್ಗೆ ಸರಕಾರಿ ಅಧಿಕಾರಿಗಳಿಗೇ ಈ ಮಟ್ಟದ ಅಲಕ್ಷ್ಯ ಅಕ್ಷಮ್ಯ ಎಂಬ ಅಭಿಪ್ರಾಯ ವ್ಯಕ್ತವಾಗಿವೆ.
ಬಿಸಿರೋಡ್‌ನಲ್ಲಿರುವ ತಹಶೀಲ್ದಾರ್ ಆಫೀಸ್ ಆವರಣದಲ್ಲಿರುವ ಕಸದ ರಾಶಿಯನ್ನು ಇನ್ನಾದರೂ ತೆಗೆಯಿಸಿ, ಸ್ವಚ್ಛ ಭಾರತ ಅಭಿಯಾನಕ್ಕೆ ಕನಿಷ್ಠ ಸರಕಾರಿ ಕಛೇರಿ ಆವರಣದೊಳಗಡೆಯಾದರೂ ಅರ್ಥ ಕಲ್ಪಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.