ಪಾಲಕ್ಕಾಡ್: ಕೇರಳದ ಕುರುಂಬಾಚಿ ಬೆಟ್ಟಕ್ಕೆ ಹತ್ತಿ ಬಂಡೆಯಲ್ಲಿ ಸಿಲುಕಿ ಸೇನೆಯ ಕ್ಷಿಪ್ರ ಕಾರ್ಯಾಚರಣೆಯಿಂದ ಜೀವ ಉಳಿಸಿಕೊಂಡಿದ್ದ ಬಾಬು ವಿರುದ್ಧ ಅರಣ್ಯ ಇಲಾಖೆ ಪ್ರಕರಣ ದಾಖಲಿಸಿದೆ.
ಬಾಬು ವಿರುದ್ಧ ಅರಣ್ಯಕ್ಕೆ ಅಕ್ರಮ ಪ್ರವೇಶ ಮಾಡಿದ್ದಕ್ಕಾಗಿ ಕೇರಳ ಫಾರೆಸ್ಟ್ ಆಕ್ಟ್ 27ರ ಅಡಿ ಪ್ರಕರಣ ದಾಖಲಾಗಿದೆ.
ಜೊತೆಯಲ್ಲಿ ಬೆಟ್ಟ ಹತ್ತಿದ್ದ ವಿದ್ಯಾರ್ಥಿಗಳ ಮೇಲೂ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಿಸುವುದಿಲ್ಲ ಎಂದು ಅರಣ್ಯ ಸಚಿವ ಎ.ಕೆ. ಶಶೀಂದ್ರನ್ ಹೇಳಿದ್ದರು. ಆದರೆ ಈ ಘಟನೆಯಿಂದಾಗಿ ಇಂತಹಾ ನಿಷೇಧಿತ ಪ್ರದೇಶಗಳಿಗೆ ಜನರು ಭೇಟಿ ನೀಡಲು ಆಸಕ್ತಿ ತೋರಬಹುದೆಂಬ ಆತಂಕದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿದು ಬಂದಿದೆ.
ಬಾಬು ಮನೆಗೆ ತೆರಳಿ ಅರಣ್ಯಾಧಿಕಾರಿಗಳು ಹೇಳಿಕೆ ಪಡೆದಿದ್ದು, ತಪ್ಪಿತಸ್ಥನೆಂದು ಸಾಬೀತಾದರೆ ಒಂದು ವರ್ಷ ಜೈಲು ಶಿಕ್ಷೆ ಅಥವಾ ದಂಡ ತೆರಬೇಕಾಗುತ್ತದೆ.