Home ಟಾಪ್ ಸುದ್ದಿಗಳು ಕುಡಿದ ಮತ್ತಿನಲ್ಲಿ ಜಾಲಿ ರೈಡ್‍; ಇನ್ಸ್ ಪೆಕ್ಟರ್ ದಂಪತಿಯ ಹೈಡ್ರಾಮ

ಕುಡಿದ ಮತ್ತಿನಲ್ಲಿ ಜಾಲಿ ರೈಡ್‍; ಇನ್ಸ್ ಪೆಕ್ಟರ್ ದಂಪತಿಯ ಹೈಡ್ರಾಮ

ಬೆಂಗಳೂರು:  ಕುಡಿದ ಮತ್ತಿನಲ್ಲಿ ತಡರಾತ್ರಿ ಜಾಲಿ ರೈಡ್‍ಗೆ ಬಂದಿದ್ದ ಇನ್ಸ್ ಪೆಕ್ಟರ್ ದಂಪತಿ ಅಪಘಾತ ನಡೆಸಿ ಹೈಡ್ರಾಮಾ ಸೃಷ್ಟಿಸಿರುವ ಘಟನೆ  ಚಾಮರಾಜಪೇಟೆ ಠಾಣೆ ಎದುರು ನಡೆದಿದೆ.

ಸಿಎಆರ್ ಇನ್ಸ್ ಪೆಕ್ಟರ್ ಸಂಜೀವ್ ಹಾಗೂ ಅವರ ಪತ್ನಿ ಉಷಾ ಕುಡಿದ ಮತ್ತಿನಲ್ಲಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಕಾರು ಚಲಾಯಿಸಿದ ಉಷಾ ಚಾಮರಾಜಪೇಟೆಯ 6ನೇ ಮುಖ್ಯರಸ್ತೆಯಲ್ಲಿ ಕಾರೊಂದಕ್ಕೆ ಡಿಕ್ಕಿ ಹೊಡೆದು ಅಪಘಾತ ಉಂಟು ಮಾಡಿದ್ದಾರೆ.

ಈ ಬಗ್ಗೆ ಚಾಮರಾಜಪೇಟೆ ಠಾಣೆಯಲ್ಲಿ ಇನ್ಸ್ ಪೆಕ್ಟರ್ ದಂಪತಿ ವಿರುದ್ಧ ದೂರು ದಾಖಲಾಗಿದ್ದು, ತಮ್ಮ ಮೇಲೆ ಹಲ್ಲೆ ನಡೆಸಲಾಗಿದೆ ಎಂದು  ದಂಪತಿ ಪ್ರತಿದೂರು ನೀಡಿದ್ದಾರೆ.

ತಪಾಸಣೆ ನಡೆಸಿದ ಪೊಲೀಸರಿಗೆ ಇಬ್ಬರೂ ಕುಡಿದಿರುವುದು ಪತ್ತೆ ಆಗಿದೆ. ಇನ್ಸ್ಪೆಕ್ಟರ್ ಸಂಜೀವ್, ಉಷಾ ಮದ್ಯಸೇವನೆ ದೃಢಪಟ್ಟ  ಹಿನ್ನೆಲೆ ಚಿಕ್ಕಪೇಟೆ ಸಂಚಾರಿ ಠಾಣೆಯಲ್ಲಿ ಡ್ರಂಕ್ ಅಂಡ್ ಡ್ರೈವ್ ಕೇಸ್ ದಾಖಲಾಗಿದೆ.

Join Whatsapp
Exit mobile version